ಆಂಧ್ರಪ್ರದೇಶ: ಕರಾವಳಿ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ಪ್ರದೇಶಗಳು ಜಲಾವೃತವಾಗಿವೆ. ಈ ನಡುವೆಯೇ ವಧು ಮತ್ತು ಅವರ ಕುಟುಂಬವು ಮದುವೆಯ ವಿಧಿವಿಧಾನಗಳನ್ನು ನೆರವೇರಿಸಲು ವರನ ಮನೆಗೆ ದೋಣಿಯಲ್ಲಿ ತೆರಳಿದ್ದಾರೆ. ಈ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Fully decked up #BrideOnBoat, making her way to d groom’s place along with family members: Prashanti & Ashok reportedly chose a date in July over August to have rain hassle-free wedding but a #TruantMonsoon left #AndhraPradesh‘s #Konaseema flooded #MonsoonWedding @ndtv @ndtvindia pic.twitter.com/iauxbSNIyQ
— Uma Sudhir (@umasudhir) July 15, 2022
ಆಂಧ್ರದ ಅಶೋಕ್ ಮತ್ತು ಪ್ರಶಾಂತಿ ಎಂಬ ಜೋಡಿ ಆಗಸ್ಟ್ನಲ್ಲಿ ಮದುವೆಯಾಗಬೇಕಿತ್ತು. ಆದ್ರೆ, ಅವರು ಜುಲೈನಲ್ಲೇ(ಇದೇ ತಿಂಗಳು) ಮದುವೆಯಾಗಲು ಭಯಸಿದ್ದರು. ಇದಕ್ಕೆ ಕುಟುಂಬಸ್ಥರು ಕೂಡ ಒಪ್ಪಿಗೆ ನೀಡಿ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡವು.
ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಪ್ರದೇಗಳು ಜಲಾವೃತವಾಗಿವೆ. ಆದರೂ, ವಧು ಪ್ರಶಾಂತಿ ಕುಟುಂಬ ಮತ್ತು ಸಂಬಂಧಿಕರು ಸಕಲ ಸಿದ್ಧತೆಯೊಂದಿಗೆ ವರ ಅಶೋಕ್ ಅವರ ಮನೆಗೆ ದೋಣಿಯ ಮೂಲಕ ತಲುಪಿದ್ದಾರೆ.
Big news: ಇನ್ನು 7 ದಿನಗಳಲ್ಲಿ ʻಶ್ರೀಲಂಕಾʼಗೆ ಹೊಸ ಅಧ್ಯಕ್ಷರ ನೇಮಕ: ಸ್ಪೀಕರ್ ಮಹಿಂದ ಯಾಪಾ ಅಬೇವರ್ದನಾ ಸ್ಪಷ್ಟನೆ
BIGG NEWS : ನಿರೀಕ್ಷೆಗೂ ಮುನ್ನವೇ ಈ ಬಾರಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿ : ಸಚಿವ ಆನಂದ್ ಸಿಂಗ್ ಬಾಗಿನ ಅರ್ಪಣೆ