ನವದೆಹಲಿ: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ಕಿರುತೆರೆ ನಟಿ ರಜೀತಾ ಕೊಚ್ಚರ್ (70) ಮುಂಬೈನಲ್ಲಿ ನಿಧನರಾಗಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬ್ರೈನ್ ಸ್ಟ್ರೋಕ್ ಇತ್ತು. ಅದಾದ ನಂತರ ಪಾರ್ಶ್ವವಾಯುವಿಗೆ ಒಳದಾದರು. ಆದಾಗ್ಯೂ, ಅವರು ಕ್ರಮೇಣ ಚೇತರಿಸಿಕೊಂಡರು. ಆದರೆ ಡಿಸೆಂಬರ್ 20ರಂದು ಉಸಿರಾಟದ ತೊಂದರೆ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ರಜೀತಾ ಅವರ ಸೋದರ ಸೊಸೆ ನೂಪುರ್ ಕಂಪಾನಿ ಅವರು ಮಾಹಿತಿ ನೀಡಿದ್ದಾರೆ.
ರಜೀತಾ ಅವರು ಮಣಿಕರ್ಣಿಕಾ, ಕಹಾನಿ ಘರ್ ಘರ್ ಕಿ, ಹಾತಿಮ್, ಕವಚ ಮತ್ತು ಇನ್ನೂ ಅನೇಕ ಸಿನಿಮಾಗಳು ಸೇರಿದಂತೆ ಅನೇಕ ಟಿವಿ ಶೋ ಗಳಲ್ಲಿ ನಟಿಸಿದ್ದಾರೆ. ಇವರು ಪತಿ ರಾಜೇಶ್ ಕೊಚ್ಚರ್ ಮತ್ತು ಮಗಳು ಕಪಿಶಾ ಅವರನ್ನು ಅಗಲಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದರೇ 100 ದಿನದಲ್ಲಿ ಎನ್ ಪಿಎಸ್ ರದ್ದು – ಸಿ.ಎಂ ಇಬ್ರಾಹಿಂ | JDS Party