ಕೋಲಾರ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ, ಸಾಹಿತಿ ಎಂ.ಎಸ್ ಪ್ರಭಾಕರ್ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
BREAKING NEWS: ಲಂಚ ಬೇಡಿಕೆ ಪ್ರಕರಣ; ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಲೋಕಾಯುಕ್ತ ಬಲೆಗೆ
ಕೋಲಾರ ಮೂಲದ ಕಾಮರೂಪಿ ಎಂ.ಎಸ್ ಪ್ರಭಾಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.ಕೋಲಾರ ನಗರದ ಕಠಾರಿ ಪಾಳ್ಯದಲ್ಲಿ ಇಂದು ಕೊನೆಯುಸಿರೆಳೆದರು.ಲಂಕೇಶ್ ಸೇರಿದಂತೆ ಹಿರಿಯ ಪತ್ರಕರ್ತರೊಂದಿಗೆ ಪ್ರಭಾಕರ್ ಒಡನಾಟ ಇಟ್ಟುಕೊಂಡಿದ್ದರು. ಅಸ್ಸಾಂ ನಲ್ಲಿ ಪತ್ರಿಕೋದ್ಯಮ ಆರಂಭ ಮಾಡಿದ್ದ ಇವರು, ದಿ ಹಿಂದೂ ಪತ್ರಿಕೆ ಮೂಲಕ ನೆಲ್ಸನ್ ಮಂಡೇಲಾ ಅವರನ್ನ ಸಂದರ್ಶನ ಮಾಡಿದ ಏಕೈಕ ಕನ್ನಡ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ತುಂಬಾ ಕಡಿಮೆ ಪುಸ್ತಕ ಬರೆದಿದ್ದರೂ ಹಲವು ಓದುಗರನ್ನ ಹೊಂದಿದ್ದ ಹಿರಿಯ ಸಾಹಿತಿಯಾಗಿದ್ದಾರೆ. 2021 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ರು.