ಅಲ್ವಾರ್(ರಾಜಸ್ಥಾನ): ತರಕಾರಿ ವ್ಯಾಪಾರಿಯೊಬ್ಬರನ್ನು ಕಳ್ಳನೆಂದು ತಪ್ಪಾಗಿ ಭಾವಿಸಿದ್ದಲ್ಲದೇ ಆತನನ್ನು ಥಳಿಸಿ ಕಂದಿರುವ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ಸೋಮವಾರ ನಡೆದಿದೆ.
ಮೃತನನ್ನು 45 ವರ್ಷದ ತರಕಾರಿ ಮಾರಾಟಗಾರ ಚಿರಂಜಿ ಸೈನಿ ಎಂದು ಗುರುತಿಸಲಾಗಿದೆ. ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ವಾರ್ ಜಿಲ್ಲೆಯ ರಾಂಬಾಸ್ ಗ್ರಾಮದಲ್ಲಿ ಸೈನಿ ಜಮೀನಿನಿಂದ ಮನೆಗೆ ಹೋಗುತ್ತಿದ್ದಾಗ ಹತ್ತಕ್ಕೂ ಹೆಚ್ಚು ಜನರಿಂದ ಗುಂಪೊಂದು ಆತನನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಥಳಿಸಲಾಗಿತ್ತು. ಈ ವೇಳೆ ಗಾಯಗೊಂಡ ಅವನನ್ನು ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಆತ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿದ್ದಾನೆ.
ಏನಿದು ಘಟನೆ?
ಸೈನಿಗೆ ಥಳಿಸಿವ ಮೊದಲು ಕೆಲವು ಹೊತ್ತಿನ ಹಿಂದೆ ಕೆಲ ಕಳ್ಳರು ಟ್ರ್ಯಾಕ್ಟರ್ಅನ್ನು ಕದ್ದೊಯ್ದಿದ್ದರು. ಈ ಖಚಿತ ಮಾಹಿತಿ ಮೇರೆಗೆ ಸದರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ಕಳ್ಳರನ್ನು ಬೆನ್ನಟ್ಟಿದ್ದಾರೆ. ಪೊಲೀಸರು ಸುತ್ತುವರಿದಿರುವುದನ್ನು ಕಂಡ ಕಳ್ಳರು ಪವರ್ಹೌಸ್ ಬಳಿಯ ಜಮೀನಿನಲ್ಲಿ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.
ಈ ವೇಳೆ ಅದೇ ದಾರಿಯಲ್ಲಿ ಬಂದ ಸೈನಿಯನ್ನು ಟ್ರ್ಯಾಕ್ಟರ್ ಮಾಲೀಕರು ಕಳ್ಳ ಎಂದು ತಪ್ಪಾಗಿ ಭಾವಿಸಿದರು. ಮಾಲೀಕ ಹಾಗೂ ಅವನ ಸಹಚರರು ಸೈನಿಯನ್ನು ಥಳಿಸಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಆಗಮಿಸಿದ ಪೊಲೀಸರು ಮಧ್ಯಪ್ರವೇಶಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಜೈಪುರ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಸೈನಿ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸಾವನ್ನಪ್ಪಿದ್ದಾನೆ.
BIG NEWS: ಬೆಂಗಳೂರು ವಲಸಿಗರಿಗೆ ಅತ್ಯುತ್ತಮ ಆರು ನಗರಗಳಲ್ಲಿ ಒಂದಾಗಿದೆ: ವರದಿ
BIGG NEWS: ಭಾರತದ ಕುರಿತು ಭವಿಷ್ಯ ಹೇಳಿ ಆತಂಕ ಸೃಷ್ಟಿಸಿದ ಬಾಬಾ ವಂಗಾ!