Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಒಂದೇ ದಿನದಲ್ಲಿ ಹೂಡಿಕೆದಾರರ 7.6 ಲಕ್ಷ ಕೋಟಿ ಸಂಪತ್ತು ಭಸ್ಮ! | Stock market

19/03/2026 2:43 PM

ಸರ್ಕಾರಿ vs ಖಾಸಗಿ ಆಸ್ಪತ್ರೆ ಲಸಿಕೆ: ನಿಮ್ಮ ಮಗುವಿಗೆ ಯಾವುದು ಸೂಕ್ತ? ಇಲ್ಲಿದೆ ತಜ್ಞರ ಸಲಹೆ

19/03/2026 2:40 PM

ಪ್ರತಿನಿತ್ಯ ‘ಸಿಹಿ ಗೆಣಸು’ ಸೇವಿಸಿದರೆ ಏನಾಗುತ್ತೆ ಗೊತ್ತೇ? ಆರೋಗ್ಯದ ಗುಟ್ಟು ಬಿಚ್ಚಿಟ್ಟ ತಜ್ಞರು!

19/03/2026 2:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಜಾತಿಗಣತಿ ವರದಿ ಒಪ್ಪದಿರಲು ವೀರಶೈವ-ಲಿಂಗಾಯತ ಮಹಾಸಭಾ ತೀರ್ಮಾನ: ರಾಜಕುಮಾರ ಪಾಟೀಲ್ ತೇಲ್ಕೂರ
KARNATAKA

BIG NEWS: ಜಾತಿಗಣತಿ ವರದಿ ಒಪ್ಪದಿರಲು ವೀರಶೈವ-ಲಿಂಗಾಯತ ಮಹಾಸಭಾ ತೀರ್ಮಾನ: ರಾಜಕುಮಾರ ಪಾಟೀಲ್ ತೇಲ್ಕೂರ

By kannadanewsnow0925/10/2024 6:21 PM

ಕಲಬುರಗಿ :ಕಾಂತರಾಜು ಅವರ ನೇತೃತ್ವದ ಸಮಿತಿ ನಡೆಸಿರುವ ಜಾತಿ ಜನಗಣತಿಯನ್ನು ರಾಜ್ಯಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿದ್ದು, ಈ ಬಗ್ಗೆ ವೀರಶೈವ-ಲಿಂಗಾಯತ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿದೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾತಿ ಗಣತಿ ಕುರಿತಾಗಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಲಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಬೆಂಗಳೂರಿನಲ್ಲಿ ನಡೆದ ಸಭೆಯ ಪ್ರಮುಖ ನಿರ್ಣಯಗಳಾದ ಅಖಿಲ ಭಾರತ ವೀರಶೈವ/ಲಿಂಗಾಯತ ಯ/ಲಿಂಗಾಯತ ಮಹಾಸಭೆಯು ಬಸವಾದಿ ತತ್ವಗಳನ್ನು ಪ್ರತಿಪಾದಿಸುತ್ತಿದ್ದು, ಸರ್ವರಿಗೂ ಲೇಸನ್ನೆ ಬಯಸುವ ಸಮಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಶರಣರ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಸಂಸ್ಥೆಯಾಗಿದೆ. ನಾವು ಜಾತಿಗಣತಿಯ ವಿರೋಧಿಗಳಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ.

ಕಳೆದ 10 ವರ್ಷಗಳ ಹಿಂದೆ ನಡೆಸಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯು ಹಲವು ವೈರುದ್ಧ ಮತ್ತು ಲೋಪಗಳಿಂದ ಕೂಡಿದ್ದು, ಇದನ್ನು ಸರಿಪಡಿಸುವ ಅಗತ್ಯವಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು, ರಾಜ್ಯ ಸರ್ಕಾರದ ಪರಿಗಣನೆಯಲ್ಲಿರುವ, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸುಗಳು, ಶ್ರೀ ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಸಿದ ಸಮೀಕ್ಷಾ ವರದಿಯಾಗಿದ್ದು, ಈ ವರದಿಯು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾದುದ್ದರಿಂದ ಸ್ವೀಕಾರಕ್ಕೆ ಆರ್ಹವಲ್ಲವೆಂದು ಮಹಾಸಭೆಯು ಸ್ಪಷ್ಟವಾಗಿ ಅಭಿಪ್ರಾಯಿಸುತ್ತದೆ.

ಮುಖ್ಯಮಂತ್ರಿಗಳು ಈ ಕುರಿತಾದ ಯಾವುದೇ ಉದ್ದೇಶಿತ ಪ್ರಕ್ರಿಯೆಯನ್ನು ಕೈಬಿಡಬೇಕು, ರಾಜ್ಯ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ವಿವಿಧ ವರ್ಗಗಳ ಅಡಿಯಲ್ಲಿ ಹಲವಾರು ಲಿಂಗಾಯತ ಉಪಪಂಗಡಗಳ ಹೆಸರಿನ ಜೊತೆಯಲ್ಲಿ ‘ಲಿಂಗಾಯತ’ ಪದವಿಲ್ಲದೇ ಕೇವಲ ಉಪಪಂಗಡಗಳ ಹೆಸರನ್ನು ಮಾತ್ರ ನಮೂದಿಸಲಾಗಿರುತ್ತದೆ. ಆದುದರಿಂದ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯ ಸಿವಿಲ್ ಅಪೀಲ್ ನಂ. 7241/2021 ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಆಧಾರವಾಗಿರಿಸಿಕೊಂಡು, ಎಲ್ಲಾ ಲಿಂಗಾಯತ ಉಪಪಂಗಡಗಳ ಜೊತೆಯಲ್ಲಿ ‘ಲಿಂಗಾಯತ’ ಎಂದು ನಮೂದಿಸಿದ ಆಯ್ಕೆಯನ್ನು ಈಗಿರುವ ಪಟ್ಟಿಯಲ್ಲಿ, ಉಪಪಂಗಡಗಳಿರುವ ವರ್ಗಗಳನ್ನು ಬದಲಾಯಿಸದೇ ಸರ್ಕಾರದ ಆದೇಶಕ್ಕೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಗಿದೆ,

ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮಾನ್ಯ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಬೇಕು, ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತಾದ ಸರ್ಕಾರದ ಎಲ್ಲಾ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ ಎಂದು ನಮ್ಮ ಸಮುದಾಯದ ಪರವಾಗಿ ಮಹಾಸಭೆಯ ಅಧ್ಯಕ್ಷನಾಗಿ ನಾನು ತುಂಬು ಹೃದಯದಿಂದ ಆಶ್ವಾಸನೆಯನ್ನು ನೀಡುತ್ತೇನೆ ಎಂದು ಸಂಘದ ಅಧ್ಯಕ್ಷರಾದ ಶಂಕರ ಬಿದರಿ ತಿಳಿಸಿದ್ದಾರೆ ಎಂದು ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಾನು ಪಾಲ್ಗೊಂಡಿದೆ ಆ ಸಭೆಯಲ್ಲಿ ಮಹಾ ಸಭಾ ದಿಂದ 6 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರ ನಿರ್ಣಯಗಳಿಗೆ ಸ್ಪಂದಿಸಬೇಕು ಒಂದು ವೇಳೆ ಸ್ಪಂದಿಸದಿದ್ದರೆ ಮಹಾಸಭಾದ ಅಧ್ಯಕ್ಷರಾದ ಶಕರ ಬಿದರಿ ಅವರು ಆದೇಶದ ಪ್ರಕಾರ ಮುಂದಿನ ಹೊರಾಟ ರೂಪಿಸಲಾಗುವುದು ಎಂದು ಸೇಡಂನ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದ್ದಾರೆ.

BIG NEWS: ಬೆಂಗಳೂರಲ್ಲಿ ಡ್ರೋನ್ ಮೂಲಕ ನಿರ್ಮಾಣ ಹಂತದ ಕಟ್ಟಡಗಳ ಸಮೀಕ್ಷೆ: ಡಿಸಿಎಂ ಡಿ.ಕೆ ಶಿವಕುಮಾರ್

JOB ALERT: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ: ರಾಜ್ಯ ಸರ್ಕಾರದಿಂದ 4,115 ನೇಮಕಾತಿಗೆ ಗ್ರೀನ್ ಸಿಗ್ನಲ್ | Karnataka Police Recruitment 2024

Share. Facebook Twitter LinkedIn WhatsApp Email

Related Posts

ಸರ್ಕಾರಿ vs ಖಾಸಗಿ ಆಸ್ಪತ್ರೆ ಲಸಿಕೆ: ನಿಮ್ಮ ಮಗುವಿಗೆ ಯಾವುದು ಸೂಕ್ತ? ಇಲ್ಲಿದೆ ತಜ್ಞರ ಸಲಹೆ

19/03/2026 2:40 PM2 Mins Read

‘ರೌಡಿಶೀಟರ್‌’ಗಳೊಂದಿಗೆ ಬಿಲ್ಡಪ್ ರೀಲ್ಸ್: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ವಿರುದ್ಧ ‘FIR’ ದಾಖಲು

19/03/2026 2:19 PM1 Min Read

BREAKING : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ : ಶಾಸಕ ಯತ್ನಾಳ್ ಹೊಸ ಬಾಂಬ್!

19/03/2026 2:09 PM1 Min Read
Recent News

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಒಂದೇ ದಿನದಲ್ಲಿ ಹೂಡಿಕೆದಾರರ 7.6 ಲಕ್ಷ ಕೋಟಿ ಸಂಪತ್ತು ಭಸ್ಮ! | Stock market

19/03/2026 2:43 PM

ಸರ್ಕಾರಿ vs ಖಾಸಗಿ ಆಸ್ಪತ್ರೆ ಲಸಿಕೆ: ನಿಮ್ಮ ಮಗುವಿಗೆ ಯಾವುದು ಸೂಕ್ತ? ಇಲ್ಲಿದೆ ತಜ್ಞರ ಸಲಹೆ

19/03/2026 2:40 PM

ಪ್ರತಿನಿತ್ಯ ‘ಸಿಹಿ ಗೆಣಸು’ ಸೇವಿಸಿದರೆ ಏನಾಗುತ್ತೆ ಗೊತ್ತೇ? ಆರೋಗ್ಯದ ಗುಟ್ಟು ಬಿಚ್ಚಿಟ್ಟ ತಜ್ಞರು!

19/03/2026 2:29 PM

ಯುವಜನತೆಯಲ್ಲಿ ಹೆಚ್ಚಾಗುತ್ತಿದೆ ‘ಸಂಧಿವಾತ’: ‘ಕಠಿಣ ಫಿಟ್ನೆಸ್ ಚಾಲೆಂಜ್‌’ಗಳೇ ಮುಳುವು?

19/03/2026 2:24 PM
State News
KARNATAKA

ಸರ್ಕಾರಿ vs ಖಾಸಗಿ ಆಸ್ಪತ್ರೆ ಲಸಿಕೆ: ನಿಮ್ಮ ಮಗುವಿಗೆ ಯಾವುದು ಸೂಕ್ತ? ಇಲ್ಲಿದೆ ತಜ್ಞರ ಸಲಹೆ

By kannadanewsnow0919/03/2026 2:40 PM KARNATAKA 2 Mins Read

ಮಗು ಹುಟ್ಟಿದ ನಂತರ ಪೋಷಕರಿಗೆ ಎದುರಾಗುವ ಅತಿದೊಡ್ಡ ಜವಾಬ್ದಾರಿಗಳಲ್ಲಿ ‘ಲಸಿಕೆ’ (Vaccination) ಕೂಡ ಒಂದು. ಮಗುವನ್ನು ಮಾರಕ ಕಾಯಿಲೆಗಳಿಂದ ರಕ್ಷಿಸಲು…

‘ರೌಡಿಶೀಟರ್‌’ಗಳೊಂದಿಗೆ ಬಿಲ್ಡಪ್ ರೀಲ್ಸ್: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ವಿರುದ್ಧ ‘FIR’ ದಾಖಲು

19/03/2026 2:19 PM

BREAKING : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ : ಶಾಸಕ ಯತ್ನಾಳ್ ಹೊಸ ಬಾಂಬ್!

19/03/2026 2:09 PM

ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ, ಬೆಂಗಳೂರು ಹೋಟೆಲ್ ಅಸೋಸಿಯೇಷನ್

19/03/2026 1:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.