ಬಾಗಲಕೋಟೆ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಸಾವರ್ಕರ್ ಸಮರ ಶುರುವಾಗಿದೆ. ವೀರ ಸಾವರ್ಕರ್ ಭಾವಚಿತ್ರ ಹಾಕುವ ವಿಚಾರದಲ್ಲಿ ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೀರ ಸಾವರ್ಕರ್ ಮತ್ತು ಕರ್ನಾಟಕಕ್ಕೂ ಏನು ಸಂಬಂಧ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
BIGG NEWS: ವೀರ ಸಾವರ್ಕರ್ ವಿಚಾರವನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ; ಯತ್ನಾಳ್
ದೇಶಕ್ಕೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೂ ಏನು ಸಂಬಂಧ ಎಂದು ಡಿಕೆಶಿಯವರನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಸೋನಿಯಾಗಾಂಧಿ ವಿದೇಶದಿಂದ ಬಂದವರು ಎಂದು ಹೇಳಿದರು.
ಕಾಂಗ್ರೆಸ್ ಯಾವ ದಿಕ್ಕಿನಲ್ಲಿ ಹೋಗುತ್ತಿದೆ? ಸೋನಿಯಾ ಗಾಂಧಿ ಜೈಲು ಶಿಕ್ಷೆ ಅನುಭವಿಸಿದ್ದಾರಾ? ರಾಹುಲ್ ಗಾಂಧಿ ಅನುಭವಿಸಿದ್ದಾರಾ? ಡಿ.ಕೆ.ಶಿವಕುಮಾರ್ ಮತ್ತು ಅವರ ಶಿಷ್ಯಂದಿರಿಗೆ ತಿಹಾರ್ ಜೈಲು, ಪರಪ್ಪನ ಅಗ್ರಹಾರ ಜೈಲು ಗೊತ್ತು. ಇವರೆಲ್ಲಾ ವ್ಯಯಕ್ತಿಕವಾಗಿ ಮಾಡಿದಂತರ ರಾಷ್ಟದ್ರೋಹಿ ಚಟುವಟಿಕೆಗಳಿಗಾಗಿ ಜೈಲು ಸೇರಿದರು. ಆದರೆ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಸೇರಿದರು ಎಂದರು.