ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮನೆಯಲ್ಲಿ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಅಳವಡಿಸೋದ್ರಿಂದ ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಕನ್ನಡಿಯು ಮನೆಯನ್ನು ಸುಂದರಗೊಳಿಸಲು ಉದ್ದೇಶಿಸಿದ್ದರೂ, ಅದನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವ ಮೂಲಕ, ಅದು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.
ಯಾವ ಆಕಾರದ ಕನ್ನಡಿ ಬಳಕೆ ಉತ್ತಮ?
ಆಯತಾಕಾರದ ಮತ್ತು ಚೌಕಾಕಾರದ ಕನ್ನಡಿಗಳನ್ನು ಸಾಮಾನ್ಯವಾಗಿ ಮನೆಗಳಲ್ಲಿ ಬಳಸಲಾಗುತ್ತದೆ. ಇದು ವಾಸ್ತು ಪ್ರಕಾರ, ಸಂಪೂರ್ಣವಾಗಿ ಉತ್ತಮವಾಗಿರುತ್ತದೆ. ಆದರೆ, ದುಂಡಗಿನ ಆಕಾರದ ಮತ್ತು ಅಂಚಿನ ಗಾಜನ್ನು ಎಂದಿಗೂ ಮನೆಯಲ್ಲಿ ಬಳಸಬಾರದು. ಸುತ್ತಿನ ಬದಲಿಗೆ, ನೀವು ಅಷ್ಟಭುಜಾಕೃತಿಯ ಅಂದರೆ, ಎಂಟು ಮೂಲೆಗಳ ಕನ್ನಡಿಯನ್ನು ಬಳಸಬಹುದು. ಮೊನಚಾದ ಆಕಾರದ ಕನ್ನಡಿಯನ್ನು ಇರಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಇರುತ್ತದೆ ಮತ್ತು ತೊಂದರೆ ಉಂಟಾಗುತ್ತದೆ ಎಂಬ ನಂಬಿಕೆ.
ಮನೆಯ ಈ ದಿಕ್ಕಿನಲ್ಲಿ ಕನ್ನಡಿಯನ್ನು ಅಳವಡಿಸಿ…
ಮನೆಯಲ್ಲಿ ಕನ್ನಡಿ ಇಡಲು ಈಶಾನ್ಯ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಿ. ಏಕೆಂದರೆ, ಈ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸುವ ಮೂಲಕ ನಿಮ್ಮ ಸಮಸ್ಯೆಗಳು ಕ್ರಮೇಣ ಕಡಿಮೆ ಆಗುತ್ತಾ ಹೋಗುತ್ತವೆ. ಈ ವಾಸ್ತು ಪರಿಹಾರವನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಖಂಡಿತವಾಗಿಯೂ ನಿಮ್ಮ ಮನೆಯ ವಾಸ್ತುವನ್ನು ಸರಿಪಡಿಸುತ್ತೀರಿ ಎಂದು ಭಾವಿಸುತ್ತೇವೆ.
Health Tips : ಮಹಿಳೆಯರೇ..! ರಾತ್ರಿ ಹೊತ್ತು ಮಲಗುವ ವೇಳೆ ಈ ಎಚ್ಚರಿಕೆ ವಹಿಸಿ , ಇಲ್ಲವಾದ್ರೆ ಸಮಸ್ಯೆ ತಪ್ಪಿದಲ್ಲ