ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮನೆಯ ಅಲಂಕಾರಕ್ಕಾಗಿ ಹಲವು ಬಗೆಯ ಕೃತಕ ಹೂಗಳನ್ನು ಬಳಸುತ್ತೇವೆ. ಇವು ಮನೆಯ ಅಂದವನ್ನು ಹೆಚ್ಚಿಸುತ್ತವೆ. ಆದರೆ ಶಾಸ್ತ್ರಗಳ ಪ್ರಕಾರ ಮನೆಯಲ್ಲಿಡುವ ಅಲಂಕಾರಿಕ ಸವ್ತುಗಳು ವಾಸ್ತು ದೋಷಗಳನ್ನು ಉಂಟುಮಾಡಬಹುದು.
ವಾಸ್ತು ಪ್ರಕಾರ, ಮನೆಯಲ್ಲಿ ನಕಲಿ ಹೂವುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ನಕಲಿ ಅಥವಾ ಕೃತಕ ಹೂವುಗಳನ್ನು ಏಕೆ ಇಡಬಾರದು ಎಂದು ತಿಳಿಯುವುದು ಅಗತ್ಯವಾಗಿದೆ.
ಕೃತಕ ಹೂಗಳನ್ನು ಇಡುವುದರಿಂದಾಗುವ ಪರಿಣಾಮಗಳು
ಕುಟುಂಬದಲ್ಲಿ ಭಿನ್ನಾಭಿಪ್ರಾಯ
ಮನೆಯಲ್ಲಿ ಕೃತಕ ಹೂವುಗಳನ್ನು ಇಡುಉವುದರುಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಬಹುದು. ಪ್ರತಿ ಸಣ್ಣ ವಿಷಯಕ್ಕೂ ಸಂಘರ್ಷ ಉಂಟಾಗುತ್ತದೆ. ಮನೆಯ ಸಂತೋಷ ಮತ್ತು ಶಾಂತಿಗೆ ಭಂಗ ಬರುತ್ತದೆ.
ನಕಾರಾತ್ಮಕ ಚಿಂತನೆ
ಮನೆಯಲ್ಲಿ ಪರಿಮಳಯುಕ್ತ ಮತ್ತು ತಾಜಾ ಹೂವುಗಳನ್ನು ಇಡುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಬರುತ್ತವೆ. ಆದರೆ ಈ ನಕಲಿ(ಆರ್ಟಿಫಿಯಲ್) ಹೂವುಗಳು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಕೃತಕ ಹೂವುಗಳು ನಮ್ಮ ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ವಿಶೇಷವಾಗಿ ಮಹಿಳೆಯರ ಒತ್ತಡಕ್ಕೆ ಕಾರಣವಾಗಬಹುದು.
ಮನೆಯ ಶಕ್ತಿ ಕುಗ್ಗುವಿಕೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯನ್ನು ಯಾವಾಗಲೂ ನೈಸರ್ಗಿಕ ಹೂವುಗಳಿಂದ ಅಲಂಕರಿಸಬೇಕು. ಮನೆಯಲ್ಲಿ ಕೃತಕ ಹೂವುಗಳನ್ನು ಇಡುವುದು ತುಂಬಾ ಅಶುಭ. ಈ ಕಾರಣದಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂವಹನ ಇರುತ್ತದೆ. ಇವುಗಳು ಮನೆಯಲ್ಲಿರುವುದರಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಕುರಿತು ಎಫ್ಬಿಯಲ್ಲಿ ಪೋಸ್ಟ್ ಶೇರ್: 16 ವರ್ಷದ ಬಾಲಕಿಗೆ ಜೀವ ಬೆದರಿಕೆ ಕರೆ