ಮಂಗಳೂರು : ಮಂಗಳೂರು ಏರ್ ಪೋರ್ಟ್ ನಲ್ಲಿ ನಾಲ್ಕು ತಿಂಗಳ ಕಾಲ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜನವರಿ 27ರಿಂದ ಮೇ31ರ ನಾಲ್ಕು ತಿಂಗಳ ಅವಧಿಯಲ್ಲಿ ರನ್ ವೇ ದುರಸ್ತಿ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಹಗಲು ಹೊತ್ತು ಮಾತ್ರ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದ್ದು, ರಾತ್ರಿ ವೇಳೆ ಸಂಚಾರ ಯಥಾವತ್ತಾಗಿ ನಡೆಯಲಿದೆ.
ಏರ್ಪೋರ್ಟ್ ನಲ್ಲಿ ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ರನ್ ವೇ ದುರಸ್ತಿ ಕಾಮಗಾರಿ ನಡೆಯಲಿದ್ದು, ಈ ಹಿನ್ನೆಲೆ ಹಗಲು ಹೊತ್ತು ವಿಮಾನ ಹಾರಾಟ ನಿಷೇಧಿಸಲಾಗಿದೆ. ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳಲ್ಲಿ ಕಾಮಗಾರಿ ನಡೆಯುವುದಿಲ್ಲ ಹಾಗಾಗಿ ಅಂತಹ ಸಂದರ್ಭದಲ್ಲಿ ಹಗಲು ಹೊತ್ತು ವಿಮಾನ ಹಾರಾಟ ನಡೆಸಬಹುದಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
‘ಆಕೆಯ ದೇಹದ ಮೇಲೆ ಒಂದೇ ಒಂದು ತುಂಡು ಬಟ್ಟೆಯೂ ಇರಲಿಲ್ಲ’: ದೆಹಲಿ ಸಂತ್ರಸ್ತೆಯ ತಾಯಿ ಸ್ಪೋಟಕ ಹೇಳಿಕೆ
ಬಿಗ್ ಬಾಸ್ ವಿನ್ನರ್ ‘ರೂಪೇಶ್ ಶೆಟ್ಟಿ’ಗೆ ಘೋಷಿಸಿದ್ದು 60 ಲಕ್ಷ , ಆದರೆ ಕೈಗೆ ಸಿಗೋದು ಎಷ್ಟು.? |BIGGBOSS-9