ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ವರದಾ ನದಿ ತುಂಬಿ ಹರಿಯುತ್ತಿದೆ. ಇದರಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳವಿಗಿ ಹಾಗೂ ನೀರಲಗಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಆ್ಯಂಬುಲೆನ್ಸ್ ಸೇತುವೆ ಮೇಲೆ ಸಿಲುಕಿದ್ದಾರೆ.
ಆಸ್ಪತ್ರೆಗೆ ತೆರಳಲಾಗದೆ ತುಂಬು ಗರ್ಭಿಣಿ ಮಹಿಳೆಯ ಪರದಾಡಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದ ಸಂಬಂಧಿಕರು.
ಗುಯಿಲುಗುಂದಿ ಗ್ರಾಮದಿಂದ ವಾಪಸ್ ಹಾವೇರಿಗೆ ಬರುವಾಗ ಏಕದಂದ ವರದಾ ನದಿ ನೀರು ಹೆಚ್ಚಾಗಿದೆ.
ಆ್ಯಂಬುಲೆನ್ಸ್ ತೆರಳಲು ಆಗದಿದ್ದಾಗ ನಡುಮಟ್ಟದ ನೀರಿನಲ್ಲಿ ತೆರಳಿದ ಗರ್ಬಿಣಿ ಮಹಿಳೆ.ಆಕೆಯನ್ನು ಸುರಕ್ಷಿತವಾಗಿ ಆ್ಯಂಬುಲೆನ್ಸ್ ಸಿಬ್ಬಂದಿ ಕರೆದ್ಯೊಯದ್ದಿದ್ದಾರೆ.
ಗರ್ಭಿಣಿ ಮಹಿಳೆಯನ್ನು ರಕ್ಷಿಸಿದ ಸಿಬ್ಬಂದಿಯ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಗುತ್ತಲ ಪ್ರಾಥಮಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ಸಿಬ್ಬಂದಿ ಮಾನವೀಯತೆ ತೋರಿದಿದ್ದಾರೆ.