ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿಗೆ ಇಡಿ ರಾಜ್ಯವೆ ತಲೆ ತಗ್ಗಿಸುವಂತಹ ಘಟನೆ ನಡೆದಿದ್ದು, ಒಂಟಮೂರಿಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಅಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ತಿಂಗಳಲ್ಲೇ ಸಿಐಡಿ ತನಿಖೆ ಮುಗಿಸಿದೆ.
ತನಿಖ ವರದಿ ಸಲ್ಲಿಸಲು ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದ್ದು, ಇದೇ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಘಟನೆ ಕುರಿತಂತೆ ಸ್ವಯಂ ಪ್ರೇರಿತವಾಗಿ ಹೈಕೋರ್ಟ್ ವಿಚಾರಣೆ ನಡೆಸಿತ್ತು.ಬೆಳಗಾವಿಯ ವಂಟಮೂರಿಯಲ್ಲಿ ನಡೆದಿದ್ದ ಅಮಾನವೀಯ ಘಟನೆ ಮಹಿಳೆಯನ್ನ ಬೆತ್ತಲೆ ಮಾಡಿಥಳಿಸಿದ್ದ ಘಟನೆ ನಡೆದಿತ್ತು.ಇದೀಗ ಸಿಐಡಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ವರದಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಮಗಳು ಕೂಡ ಹೇಳಿಕೆ ಕೊಟ್ಟಿದ್ದು, ಸಾಕಷ್ಟು ಪ್ರಮುಖತೆ ಪಡೆದುಕೊಂಡಿದೆ. ಯುವಕನ ಜೊತೆ ಓಡಿ ಹೋಗಿದ್ದ ಯುವತಿ ತಂದೆ ಮತ್ತು ಚಿಕ್ಕಪ್ಪನ ವಿರುದ್ಧವೇ ಹೇಳಿಕೆ ಕೊಟ್ಟಿದ್ದಾಳೆ. ನಾನು ಪ್ರೀತಿ ಮಾಡಿದ ಯುವಕನ ಜೊತೆ ಹೋಗಿರುವುದು.ನನ್ನ ಯಾರು ಬಲವಂತವಾಗಿ ಕರೆದುಕೊಂಡು ಹೋಗಿಲ್ಲ ನನ್ನ ತಂದೆ ಮತ್ತು ಚಿಕ್ಕಪ್ಪ ಪ್ರಿಯಕರನ ಮನೆ ದ್ವಂಸ ಮಾಡಿ ಹಲ್ಲೆ ಮಾಡುತ್ತಿರುವುದಾಗಿ ಫೋನ್ ಮಾಡಿ ಹೇಳಿದ್ದರು ಎಂದು ಯುವತಿ ಸಿಐಡಿ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾಳೆ.