ಬೆಂಗಳೂರು: ಗುರುವಾರ ಹೊರತುಪಡಿಸಿ ಎಲ್ಲಾ ದಿನ ಬೆಂಗಳೂರು- ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ನಡೆಸಲಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ರೈಲುಗಳ ನಿಯಂತ್ರಣ
ತಿರುವನಂತಪುರಂ ವಿಭಾಗದ ವ್ಯಾಪ್ತಿಯಲ್ಲಿ ಏಪ್ರಿಲ್-2024 ತಿಂಗಳ ರೈಲ್ವೆ ಸ್ವತ್ತುಗಳ ಅಗತ್ಯ ನಿರ್ವಹಣಾ ಕಾರ್ಯಗಳಿಗಾಗಿ ಈ ಕೆಳಗಿನ ರೈಲು ಸೇವೆಯನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ.
- ಏಪ್ರಿಲ್ 4 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16315 ಮೈಸೂರು-ಕೊಚುವೇಲಿ ಎಕ್ಸ್ ಪ್ರೆಸ್ ರೈಲು 185 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತಿದೆ.
- ಏಪ್ರಿಲ್ 4 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16526 ಕೆಎಸ್ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲು 60 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತಿದೆ.
- ಏಪ್ರಿಲ್ 4, 2024 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12684 ಎಸ್ಎಂವಿಟಿ ಬೆಂಗಳೂರು-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು 135 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್ ಗುರುವಾರ ಹೊರತುಪಡಿಸಿ ಎಲ್ಲಾ ದಿನ ಸಂಚಾರ
ಮೈಸೂರು ಮತ್ತು ತಮಿಳುನಾಡಿನ ಚೆನ್ನೈ ನಿಲ್ದಾಣಗಳ ನಡುವೆ ಸಂಚಾರ ಮಾಡುವ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20663/20664) ರೈಲು ಯಾಂತ್ರಿಕ ಕಾರಣಾಂತರಗಳಿಂದ ಬುಧವಾರದ ಬದಲು ಗುರುವಾರ ಚಲಿಸುವುದಿಲ್ಲ.
ಈ ಮೊದಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬುಧವಾರ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿತ್ತು.
ಜುಲೈ 30, 2024 ರಿಂದ ಜಾರಿಗೆ ಬರುವಂತೆ ಈ ರೈಲುಗಳು ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಸಂಚಲಿಸಲಿದೆ.
‘ಅಪರಾಧಿಗಳು ಜೈಲಿನಲ್ಲಿ ಜೀವನ ಕಳೆಯುತ್ತಾರೆ’: ‘ಮಮತಾ’ಗೆ ಸಂದೇಶ್ಖಾಲಿ ನೆನಪಿಸಿದ ‘ಪ್ರಧಾನಿ ಮೋದಿ’
ಗಮನಿಸಿ: ಏ.9ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕಾಲಾವಕಾಶ