ಕೋಲಾರ : ಮುರುಡೇಶ್ವರ ಬೀಚ್ ನಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರವಾಸಕ್ಕೆ ಹೋದಾಗ ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿನಿಯರ ತವರೂರಿಗೆ ಅವರ ಮೃತದೇಹಗಳನ್ನು ರವಾನಿಸಲಾಗಿದೆ. ಈಗ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೊಡ್ಡಗುಟ್ಟಳ್ಳಿ ಗ್ರಾಮದ ವಂದನಾ ಎಂಬ ವಿದ್ಯಾರ್ಥಿನಿ ವೈದ್ಯೆಯಾಗಿ ತನ್ನ ತಾಯಿಯನ್ನು ಸಾಕುವ ಕನಸು ಹೊತ್ತಿದ್ದಳು. ಆದರೆ ಮುಡೇಶ್ವರದಲ್ಲಿ ನಡೆದ ಆ ಒಂದು ಘಟನೆ ಅವಳ ಜೀವವನ್ನೇ ಬಲಿ ಪಡೆಯಿತು.
ಹೌದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೊಡ್ಡಗುಟ್ಟಳ್ಳಿ ನಿವಾಸಿಯಾದ ವಂದನಾ ಸಹೋದರಿ ಚಾಂದನಿ ಈ ಕುರಿತು ಹೇಳಿಕೆ ನೀಡಿದ್ದಾಳೆ. ಪ್ರವಾಸಕ್ಕೆ ಹೊರಡುವ ಒಂದು ವಾರ ಮೊದಲು ಅಪರಿಚಿತ ವಿದ್ಯಾರ್ಥಿನಿಯರ ಕೊಠಡಿಗೆ ನುಗ್ಗಿದ್ದ. .ಕೊತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಪರಿಚಿತ ಒಬ್ಬ ನುಗ್ಗಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಬಳಿ ಇರುವ ಮೊರಾರ್ಜಿ ವಸತಿ ಶಾಲೆ ಹೆಣ್ಣು ಮಕ್ಕಳ ಕೊಠಡಿಗೆ ಅಪರಿಚಿತ ನುಗ್ಗಿದ್ದರ ಬಗ್ಗೆ ಪ್ರಾಂಶುಪಾಲೇಗೆ ದೂರು ನೀಡಲಾಗಿತ್ತು.
ಆಗ ನನ್ನ ತಂಗಿ ವಂದನ ವಿರುದ್ಧವೇ ಪ್ರಿನ್ಸಿಪಾಲ್ ಶಶಿಕಲಾ ಆರೋಪ ಮಾಡಿದ್ದರು. ಮೊರಾರ್ಜಿ ಶಾಲೆ ಪ್ರಿನ್ಸಿಪಾಲ್ ಶಶಿಕಲಾ ನಡೆಯಿಂದ ವಂದನ ಕುಗ್ಗಿ ಹೋಗಿದ್ದಳು. ನನ್ನ ತಾಯಿಯನ್ನು ಕೂಲಿ ಮಾಡಿಯಾದರೂ ಸಾಕುತ್ತೇನೆ ಎಂದು ವಂದನ ತಿಳಿಸಿದ್ದಳು. ಚೆನ್ನಾಗಿ ಓದಿ ವೈದ್ಯೇಯಾಗಬೇಕು ಎಂದು ವಂದನ ಮಹದಾಸೆ ಹೊಂದಿದ್ದಳು. ಆದರೆ ಪ್ರವಾಸಕ್ಕೆ ಹೋಗಿ ಮುರುಡೇಶ್ವರದಲ್ಲಿ ಸತ್ತಿದ್ದಾಳೆ ಎಂದು ಸಹೋದರಿ ಚಾಂದನಿ ಕಣ್ಣೀರು ಹಾಕಿದ್ದಾಳೆ.
ನನ್ನ ತಂದೆ ವಿಕಲಚೇತನ ತಾಯಿ ಒಂದು ಹಸು ಕಟ್ಟಿಕೊಂಡು ಮನೆ ನಿರ್ವಹಿಸುತ್ತಿದ್ದಾರೆ ನಮ್ಮ ತಾಯಿಯೇ ಇಡೀ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಬಹಳ ಕಷ್ಟದಲ್ಲಿ ನಮ್ಮ ಕುಟುಂಬಕ್ಕೆ ಯಾರೊಬ್ಬರೂ ಕೂಡ ಸಹಾಯ ಮಾಡಲಿಲ್ಲ. ವಸತಿ ಶಾಲೆಗೆ ಯಾರು ಅಕ್ರಮವಾಗಿ ಪ್ರವೇಶಿಸಿದಾಗ ಪ್ರಿನ್ಸಿಪಾಲ್ ವಂದನಾ ವಿರುದ್ಧ ಆರೋಪಿಸಿದ್ದಾರೆ. ಇದರಿಂದ ವಂದನ ಶಾಲೆಗೆ ರಜೆ ಹಾಕಿ ಊರಿಗೆ ಬಂದಿದ್ದಳು ವಂದನಾಗೆ ಧೈರ್ಯ ಹೇಳಿ ಡಿಸೆಂಬರ್ 31 ಮತ್ತೆ ನಾವು ಶಾಲೆಗೆ ಕಳುಹಿಸಿದ್ದೆವು. ಆದರೆ ಈ ಒಂದು ದುರಂತ ನಡೆಯುತ್ತಿದೆ ಎಂದು ಅಂದುಕೊಂಡಿರಲಿಲ್ಲ ಎಂದು ಕಣ್ಣೀರು ಹಾಕಿದಳು.