ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ಹಣ ವರ್ಗಾವಣೆ ಪ್ರಕರಣಕ್ಕೆ ಇದೀಗ ಸ್ಪೋಟಕ ಸಿಕ್ಕಿದ್ದು, ನಿಗಮದ ಅಧ್ಯಕ್ಷ ಚಂದ್ರಶೇಖರನ ಆತ್ಮಹತ್ಯೆ ಮಾಡಿ ಕೊಳ್ಳುವ ವೇಳೆ ಕೇವಲ ಐದು ಕೋಟಿ ಇತ್ತು, ಆದರೆ ಉಳಿದ 94 ಕೋಟಿ ಬಗ್ಗೆ ಇದೀಗ ಇಡಿ ಹಾಗೂ ಎಸ್ಐಟಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.
ಹೌದು ವಾಲ್ಮೀಕಿ ನಿಗಮದಲ್ಲಿ ಇದ್ದದ್ದು ಭರ್ತಿ 94 ಕೋಟಿ ಇತ್ತು ಎನ್ನಲಾಗಿದೆ. ನಿಗಮದ ಅಧಿಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಾಗ ನಿಗಮದಲ್ಲಿ ಇದ್ದಂತದ್ದು 5 ಕೋಟಿ ಮಾತ್ರ ಎಂದು ತಿಳಿದುಬಂದಿದೆ. ಇಡಿ ಎಸ್ ಐ ಟಿ ವಿಚಾರಣೆಯ ವೇಳೆ 34 ಕೋಟಿ ಲೆಕ್ಕ ಮಾತ್ರ ಸಿಕ್ಕಿದೆ. ಆದರೆ ಇನ್ನೂ 55 ಕೋಟಿ ಲೆಕ್ಕದ ಬಗ್ಗೆ ವಿಚಾರಣೆಗಾಗಿ ಇಡಿ ಮುಂದಾಗಿದೆ ಈಗ ಇಡಿ ಎಸ್ ಐ ಟಿ ವಿಚಾರಣೆ ಮುಂದುವರೆಸಿದೆ.
ಅಲ್ಲದೆ ನಿಗಮದಿಂದ ಬೆಂಗಳೂರಿನಲ್ಲಿರುವ ಬ್ಯಾಂಕಿಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ. ಎಂ ಜಿ ರಸ್ತೆಯಲ್ಲಿರುವ ಬ್ಯಾಂಕಿಗೆ 89 ಕೋಟಿ ಹಣ ವರ್ಗಾವಣೆ ಆಗಿದೆ. ಯೂನಿಯನ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವಂತಹ ಮಾಹಿತಿ ಇದೆ. ಅಲ್ಲದೆ ಬೇರೆ ಬೇರೆ ಕಂಪನಿ ಅಕೌಂಟಿಗೆ 89 ಕೋಟಿ ಹಣ ವರ್ಗಾವಣೆಯಾಗಿದೆ ತನಿಖೆ ಅವಳೆ 34 ಕೋಟಿ ಬಗ್ಗೆ ಇಡಿ ಹಾಗೂ ಎಸೈಟಿಗೆ ಮಾಹಿತಿ ಸಿಕ್ಕಿತ್ತು. ಇದೀಗ ಉಳಿದ ಹಣಕ್ಕಾಗಿ ತಲಾಶ್ ಮಾಡುತ್ತಿದ್ದಾರೆ.