ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಮುಖಂಡರು ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಗಂಭೀರ ಆರೋಪ ಮಾಡಲಾಗಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಬಿಜೆಪಿಯು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದಲ್ಲಿ ತೆಲಂಗಾಣದ ರಾಜಕೀಯ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದರೆ ಅದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅತ್ಯಾಪ್ತರೇ ಇರಬೇಕು ಎಂದಿದೆ.
ಕನ್ನಡಿಗರ ತೆರಿಗೆ ದುಡ್ಡನ್ನು ಲೂಟಿ ಮಾಡಿ ತೆಲಂಗಾಣದಲ್ಲಿ ಸುರಿದು ತೆಲಂಗಾಣ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು ಇದೇ ಕಾಂಗ್ರೆಸ್ ಸರ್ಕಾರ. ಇದೀಗ ಎರಡು ರಾಜ್ಯದಲ್ಲೂ ಅಧಿಕಾರದಲ್ಲಿರುವುದರಿಂದ ಹಗರಣ ನಡೆಸುವುದು ಸುಲಭವೆಂದುಕೊಂಡು #ATMSarkara ಸಿಕ್ಕಿ ಬಿದ್ದಿದೆ ಎಂಬುದಾಗಿ ಗುಡುಗಿದೆ.
ಮಾನಗೇಡಿ ಕಾಂಗ್ರೆಸ್ ಇನ್ನೂ ಭ್ರಷ್ಟ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯದೆ ಇರುವುದು ದೊಡ್ಡ ಕುಳಗಳನ್ನೇ ರಕ್ಷಣೆ ಮಾಡುವ ಸಂಚು ಹಾಕಿಕೊಂಡಿದೆ. ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಈ ಮೂಲಕ ಆತ್ಮಹತ್ಯೆ ಮಾಡಿಕೊಂಡ ಅಕೌಂಟೆಂಟ್ ಚಂದ್ರಶೇಖರ್ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಗುಡುಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದಲ್ಲಿ ತೆಲಂಗಾಣದ ರಾಜಕೀಯ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದರೆ ಅದು ಮುಖ್ಯಮಂತ್ರಿ @siddaramaiah ಹಾಗೂ ಉಪಮುಖ್ಯಮಂತ್ರಿ @DKShivakumar ಅವರ ಅತ್ಯಾಪ್ತರೇ ಇರಬೇಕು!
ಕನ್ನಡಿಗರ ತೆರಿಗೆ ದುಡ್ಡನ್ನು ಲೂಟಿ ಮಾಡಿ ತೆಲಂಗಾಣದಲ್ಲಿ ಸುರಿದು @INCTelangana ವನ್ನು ಅಧಿಕಾರಕ್ಕೆ… pic.twitter.com/17lACiV01D
— BJP Karnataka (@BJP4Karnataka) June 2, 2024
‘ಮೋದಿ’ ಮತ್ತೊಮ್ಮೆ ‘ಪ್ರಧಾನಿ’ಯಾಗ್ತಾರೆ: ‘ಕಾಲ ಭೈರವೇಶ್ವರ’ನ ‘ಶ್ವಾನ ಭವಿಷ್ಯ’