ಬೆಂಗಳೂರು: ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ನಿಶ್ಚಿತಾರ್ಥ ಕಾರ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎರಡು ವಾರಗಳ ಹಿಂದೆಯಷ್ಟೇ ನಟ ವಿದ್ಯಾಭರಣ್ ಮತ್ತು ವೈಷ್ಣವಿ ಗೌಡ ಎಂಗೇಜ್ ಆಗಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡಿತು. ಇದೀಗ ವಿವಾದ ಹುಟ್ಟಿಕೊಂಡಿದೆ.
BIGG NEWS: ಮತ್ತೆ ವಿವಾದ ಹೊತ್ತಿಸಿದ ನಟಿ ವೈಷ್ಣವಿ ಗೌಡ ಹಾಗೂ ಉದ್ಯಮಿ ವಿದ್ಯಾಭರಣ್ ನಡುವಿನ ಮದುವೆ
‘ವಿದ್ಯಾಭರಣ್ ಜೊತೆ ನಿಶ್ಚಿತಾರ್ಥ ನಡೆದಿಲ್ಲ ಅಂತ ನಾನು ಮುಂಚಿನಿಂದಲೂ ಹೇಳ್ತಾ ಬಂದಿದೀನಿ. ಇದನ್ನು ಇಲ್ಲಿಗೇ ಬಿಟ್ಟುಬಿಡಿ. ನಾನು ಈ ಕುರಿತು ಮತ್ತೆ ಮಾತನಾಡಿದ್ರೆ ಬೆಳೆಯುತ್ತಲೇ ಹೋಗುತ್ತದೆ. ಹುಡುಗನ ಕಡೆಯಿಂದ ಇನ್ನೇನೋ ಮಾತು ಬರಬಹುದು. ಅವರು ಹೆಣ್ಣು ನೋಡೋ ಶಾಸ್ತ್ರಕ್ಕೆಂದು ಬಂದು ತಾಂಬೂಲ ಬದಲಾಯಿಸಿಕೊಂಡ್ರು ಅಷ್ಟೇ. ಅದು ನಿಶ್ಚಿತಾರ್ಥ ಅಲ್ಲ’ ಎಂದು ಮಾತನಾಡಿದ್ದಾರೆ.
ನಿಶ್ಚಿತಾರ್ಥ ಆದರೆ ತಾನೇ ಕ್ಯಾನ್ಸಲ್ ಆಗೋದು. ಇದೆಲ್ಲಾ ಒಂದು ವಾರದ ಹಿಂದೆ ಆಗಿದ್ದು. ಬೆಳೆಸಿದಷ್ಟೂ ಎಳೆದುಕೊಳ್ಳುತ್ತೆ. ಬಿಟ್ಟು ಬಿಡೋಣ. ಮಾತಿಗೆ ಮಾತು ಬೇಡ. ನಾನು ಹಾಗೂ ನನ್ನ ಕುಟುಂಬ ಇದನ್ನು ಇಲ್ಲಿಗೇ ಬಿಡುತ್ತಿದ್ದೇವೆ. ಮೊದಲಿಗೇ ಗೊತ್ತಾಗಿದ್ದು ಒಳ್ಳೆಯದಾಯ್ತು.ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗ್ತಿತ್ತು ಅಲ್ವೇ?’ ಎಂದಿದ್ದಾರೆ.