ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಖ್ಯಾತ ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಹುಲ್ ನಹ್ಲಾನಿಯನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತ ಬಳಸುತ್ತಿದ್ದ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜನಪ್ರಿಯ ಟಿವಿ ನಟಿ ವೈಶಾಲಿ ಟಕ್ಕರ್ ಇಂದೋರ್’ನ ಇತ್ತೀಚೆಗೆ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೊಂದು ಪ್ರೇಮ ಪ್ರಕರಣ ಎಂದೇ ಅನುಮಾನಿಸಲಾಗಿತ್ತು, ಆದರೆ ಆಕೆ ಸಾವಿಗೆ ಬೇರೆಯದ್ದೇ ಕಾರಣ ಎಂದು ಪೊಲೀಸ್ ತನಿಖೆಗಳು ಹೇಳುತ್ತಿದೆ.
ಪೊಲೀಸರ ಕೈಯಲ್ಲಿದ್ದ ಡೆತ್ ನೋಟ್ ನಿಂದ ಹಲವು ವಿಚಾರಗಳು ಬೆಳಕಿಗೆ ಬಂದಿದ್ದು, ಬಹಳ ದಿನಗಳಿಂದ ರಾಹುಲ್ ನವ್ಲಾನಿ ಎಂಬಾತ ವೈಶಾಲಿಗೆ ಕಿರುಕುಳ ನೀಡುತ್ತಿದ್ದನಂತೆ. ಆತ ನೀಡುತ್ತಿದ್ದ ಕಿರುಕುಳದಿಂದ ವೈಶಾಲಿ ಠಕ್ಕರ್ ಬಹಳ ನೊಂದಿದ್ದಳು ಎಂಬುದು ಡೆತ್ ನೋಟ್ ನಿಂದ ಗೊತ್ತಾಗಿದೆ.. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ರಾಹುಲ್ ಮನೆಗೆ ಹೋದಾಗ ಆತ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದರು. ಇದೀಗ ಆರೋಪಿ ರಾಹುಲ್ ನಹ್ಲಾನಿಯನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.
ಸಸುರಾಲ್ ಸಿಮರ್ ಕಾದಲ್ಲಿ ಅಂಜಲಿ ಭಾರದ್ವಾಜ್, ಸೂಪರ್ ಸಿಸ್ಟರ್ಸ್’ನಲ್ಲಿ ಶಿವಾನಿ ಶರ್ಮಾ, ವಿಶ್ ಯಾ ಅಮೃತ್’ನಲ್ಲಿ ನೇತ್ರಾ ಸಿಂಗ್ ರಾಥೋಡ್: ಸಿತಾರಾ ಮತ್ತು ಮನ್ಮೋಹಿನಿ 2ರಲ್ಲಿ ಅನನ್ಯಾ ಮಿಶ್ರಾ ಪಾತ್ರದಲ್ಲಿ ವೈಶಾಲಿ ಟಕ್ಕರ್ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಟಿವಿಯಲ್ಲಿ ವೈಶಾಲಿ ಟಕ್ಕರ್ ಅವರ ಚೊಚ್ಚಲ ಪ್ರವೇಶವು ಸ್ಟಾರ್ ಪ್ಲಸ್’ನ ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ ನಾಟಕವಾಗಿದ್ದು, ಇದರಲ್ಲಿ ಅವರು 2015ರಿಂದ 2016ರವರೆಗೆ ಸಂಜನಾ ಪಾತ್ರದಲ್ಲಿ ನಟಿಸಿದ್ದರು. 2016 ರಲ್ಲಿ, ಅವರು ಯೇ ಹೈ ಆಶಿಕಿಯಲ್ಲಿ ವೃಂದಾ ಪಾತ್ರದಲ್ಲಿ ನಟಿಸಿದ್ದರು. ನಂತರ ಕೊನೆಯದಾಗಿ ಟಿವಿ ಶೋ ರಕ್ಷಾಬಂಧನ್’ನಲ್ಲಿ ಕನಕ್ ಸಿಂಗ್ಸಾಲ್ ಸಿಂಗ್ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡರು.
ಭಕ್ತಾದಿಗಳೇ ಗಮನಿಸಿ : ಹಾಸನಾಂಬೆ ದೇವಿಯ ದರ್ಶನ ಅವಧಿ ವಿಸ್ತರಣೆ : ಹಾಸನ ಜಿಲ್ಲಾಡಳಿತ ಘೋಷಣೆ | Hassanambe Temple