ಬೆಂಗಳೂರು: ಇಂದು ಕೊರೊನಾ ನಡುವೆಯೇ ವೈಕುಂಠ ಏಕಾದಶಿ ಸಂಭ್ರಮ ಸಡಗರದಿಂದ ನಡೆಯುತ್ತಿದೆ.
BIGG NEWS: ರಾಯಚೂರಿನಲ್ಲಿ ಕರುವಿನ ಮೇಲೆ ಅತ್ಯಾಚಾರ; ಕಾಮುಕ ಯುವಕ ಬಂಧನ
ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಸಾವಿರಾರು ಭಕ್ತಾದಿಗಳ ಸಾಗರವೇ ಹರಿದು ಬರುತ್ತಿದೆ. ಇದೀಗ ವೈಕುಂಠ ಏಕಾದಶಿ ಹಿನ್ನೆಲೆ ದೇವಸ್ಥಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡಿದ್ದಾರೆ.
ಇನ್ನು ವಿಜಯಪುರ ಜ್ಞಾನಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದ ಕುರಿತು ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಅವರ ಪಲ್ಸ್ ರೇಟ್ , ಆಕ್ಸಿಜನ್ ಪ್ರಮಾಣ ಎಲ್ಲವೂ ನಾರ್ಮಲ್ ಇದೆ ಎಂದು ಹೇಳಿದ್ದಾರೆ.
ಈಗಾಗಲೇ ಸಿದ್ದೇಶ್ವರ ಸ್ವಾಮೀಜಿ ನೋಡಲು ಭಕ್ತರು ಜ್ಞಾನಯೋಗಾಶ್ರಮ ಬಳಿ ಬರುತ್ತಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಆರೋಗ್ಯಲ್ಲಿ ಸ್ಥಿರವಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಹೆಲ್ತ್ ಬುಲಿಟಿನ್ ರಿಲೀಸ್ ಮಾಡಲಿದ್ದಾರೆ.