ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹೆಚ್.ಯು ವೈದ್ಯನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಇವರಲ್ಲದೇ ಉಪಾಧ್ಯಕ್ಷರಾಗಿ ದೇಶಾದ್ರಿ ಹೊಸ್ಮನೆ, ಕಾರ್ಯದರ್ಶಿಯಾಗಿ ದೀಪಕ್ ಸಾಗರ್ ಸೇರಿದಂತೆ ನೂತನ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಘಟಕದ KUWJ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ನಮ್ಮ ನಾಡು ಸಾಪ್ತಾಹಿಕ ಪುರವಣೆಯ ಮುಖ್ಯಸ್ಥರಾದಂತ ಹೆಚ್.ಯು ವೈದ್ಯನಾಥ್ ಅವರನ್ನು ಜಿಲ್ಲಾಧ್ಯಕ್ಷರಾಗಿ, ಉಪಾಧ್ಯಕ್ಷರನ್ನಾಗಿ ಶಿಕಾರಿಪುರದ ಜನಹೋರಾಟ ಪತ್ರಿಕೆಯ ವರದಿಗಾರ ಹುಚ್ರಾಯಪ್ಪ.ಕೆ.ಎಸ್, ಶಿವಮೊಗ್ಗದ ಹೊಸದಿಗಂತ ಜಿಲ್ಲಾ ವರದಿಗಾರ ಸತ್ಯನಾರಾಯಣಪ್ಪ.ಕೆ ಹಾಗೂ ನಮ್ಮ ನಾಡು ಪತ್ರಿಕೆಯ ಸುದ್ದಿ ಸಂಪಾದಕ ದೇಶಾದ್ರಿ ಹೊಸ್ಮನೆ ಅವರನ್ನು ನೇಮಕ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾ ಕೆಯುಡಬ್ಲ್ಯೂಜೆಯ ಪ್ರಧಾನ ಕಾರ್ಯದರ್ಶಿಯಾಗಿ ಡಿಡಿ ನ್ಯೂಸ್ ವರದಿಗಾರ ಆರ್.ಎಸ್ ಹಾಲಸ್ವಾಮಿ, ಕಾರ್ಯದರ್ಶಿಯಾಗಿ ಸಾಗರದ ವಿಜಯವಾಣಿ ವರದಿಗಾರ ದೀಪಕ್ ಸಾಗರ್, ಸುವರ್ಣ ನ್ಯೂಸ್ ವರದಿಗಾರ ರಾಜೇಶ್ ಕಾಮತ್ ಹಾಗೂ ಹೊಸ ದಿಗಂತ ಪತ್ರಿಕೆಯ ಛಾಯಾಗ್ರಾಹಕ ಕೆ.ಆರ್ ಸೋಮನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.
ಖಜಾಂಚಿಯಾಗಿ ನಾವಿಕ ಕನ್ನಡ ದಿನಪತ್ರಿಕೆಯ ಉಪ ಸಂಪಾದಕ ಎಸ್ ಆರ್ ರೋಹಿತ್, ಸಂಘಟನಾ ಕಾರ್ಯದರ್ಶಿಯಾಗಿ ಸೂರ್ಯಗಗನದ ಗಾ.ರಾ ಶ್ರೀನಿವಾಸ್, ಬಳ್ಳಾರಿ ಬೆಳಗಾಯಿತು ಪತ್ರಿಕೆಯ ವರದಿಗಾರ ರಾಘವೇಂದ್ರ.ವಿ ನೇಮಿಸಲಾಗಿದೆ.
ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಮ್ಮ ನಾಡು ಪತ್ರಿಕೆಯ ಸಂಪಾದಕರು ಹಾಗೂ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದಂತ ಕೆ.ವಿ ಶಿವಕುಮಾರ್, ಜಿಲ್ಲಾ ಕಾರ್ಯಾಕಾರಿ ಸಮಿತಿಯ ಸದಸ್ಯರನ್ನಾಗಿ ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ಉಪ ಸಂಪಾದಕ ಆರ್.ಪಿ ಭರತ್ ರಾಜ್ ಸಿಂಗ್, ನಾವಿಕದ ಸುದ್ದಿ ಸಂಪಾದಕ ರಂಜಿತ್.ಎಸ್.ಆರ್, ಹೊಸನಗರ ವಿಜಯವಾಣಿ ವರದಿಗಾರ ರವಿ ಬಿದನೂರು, ಕ್ರಾಂತಿ ಭಗತ್ ಸಂಪಾದಕ ನಾಗರಾಜ ಶೆಣೈ, ಹೊಸದಿಗಂತ ಪತ್ರಿಕೆಯ ಜಿಲ್ಲಾ ಪ್ರಧಾನ ವರದಿಗಾರ ಸುಬ್ರಹ್ಮಣ್ಯ ಹೊರಬೈಲು, ವಿಜಯವಾಣಿ ವರದಿಗಾರ ನವೀನ್ ಬಿಲ್ಗುಣಿ, ಶಿವಮೊಗ್ಗ ಸಿಂಹ ವರದಿಗಾರ ಆರುಂಡಿ ಶ್ರೀನಿವಾಸ್ ಮೂರ್ತಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರ್ತಿ ಕವಿತಾ ಎನ್.ಆರ್, ಸುವರ್ಣ ನ್ಯೂಸ್ ಕ್ಯಾಮೆರಾಮೆನ್ ಅತೀಕ್ ಅಹಮ್ಮದ್, ಸುದ್ದಿಲೈವ್ ಸಂಪಾದಕ ಸುರೇಂದ್ರ.ಕೆಎಸ್, ನಮ್ಮ ಟಿವಿ ಸಂಪಾದಕ ಜಗದೀಶ್ ಆಮೋಘ, ಕರುನಾಡ ಸಂಜೆಯ ಸಂಪಾದಕ ನಾಗರಾಜ ಕಲ್ಕೊಪ್ಪ, ಸೊರಬದ ಛಲದಂಕ ಮಲ್ಲ ಪತ್ರಿಕೆ ವರದಿಗಾರ ನಾಗರಾಜ್ ಜೈನ್(ಬಣ್ಣದ ಬಾಬು), ಸೀ ನ್ಯೂಸ್ ಚೈತ್ರ ಸಜ್ಜನ್ ಹಾಗೂ ಈ ನಮ್ಮ ಕನ್ನಡ ನಾಡು ವರದಿಗಾರ ರಾಜಾರಾವ್ ಜಾಧವ್ ಅವರನ್ನು ನೇಮಕ ಮಾಡಲಾಗಿದೆ.
ಇನ್ನೂ ಕೆಯುಡಬ್ಲ್ಯೂಜೆ ಶಿವಮೊಗ್ಗ ಜಿಲ್ಲಾ ಘಟಕದ ನಾಮನಿರ್ದೇಶಿತ ಸದಸ್ಯರನ್ನಾಗಿ ಟಿವಿ9 ಜಿಲ್ಲಾ ವರದಿಗಾರ ಬಸವರಾಜ ಯರಗನವಿ, ಶಿವಮೊಗ್ಗ ಟೈಮ್ಸ್ ಸುದ್ದಿ ಸಂಪಾದಕ ಹಾಲೇಶ್ ಆರ್, ಸಾತ್ವಿಕ ನುಡಿಯ ಸತೀಶ್ ಮುಂಚೆಮನೆ, ನ್ಯೂಸ್ ಕರ್ನಾಟಕ ಚೀಫ್ ಕರೆಸ್ಪಾನೆಂಡ್ಸ್ ಇಸ್ಮಾಯಿಲ್ ಎಂ ಕುಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ವಿಶೇಷ ಆಹ್ವಾನಿತರಾಗಿ ಶಿವಮೊಗ್ಗ ಟೈಮ್ಸ್ ವರದಿಗಾರ ಹಾಗೂ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅರುಣ್ ವಿ.ಟಿ, ಶಿವಮೊಗ್ಗ ಟೈಮ್ಸ್ ಸಂಪಾದಕ, ಮಾಜಿ ಅಧ್ಯಕ್ಷರಾದಂತ ಚಂದ್ರಕಾಂತ್, ಜನಹೋರಾಟ ಸಂಪಾದಕ ಹಾಗೂ ಮಾಜಿ ಅಧ್ಯಕ್ಷ ಶೃಂಗೇಶ್, ಎಚ್ಚರಿಕೆ ಸಂಪಾದಕ, ಮಾಜಿ ಪ್ರಧಾನ ಕಾರ್ಯದರ್ಶಿ ವೈ.ಕೆ ಸೂರ್ಯ ನಾರಾಯಣ, ಆಂದೋಲನ ಪತ್ರಿಕೆಯ ವರದಿಗಾರ ಗಿರೀಶ್ ಉಮ್ರಾಯ್ ನೇಮಿಸಿದ್ದರೇ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕ ಬಂಡಿಗಡಿ ಆರ್ ನಂಜುಂಡಪ್ಪ ಅವರನ್ನು ನೇಮಕ ಮಾಡಲಾಗಿದೆ.
2025-2028ನೇ ಅವಧಿಯ ಶಿವಮೊಗ್ಗ ಜಿಲ್ಲಾ ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾದಂತ ಎಲ್ಲರಿಗೂ ಕನ್ನಡ ನ್ಯೂಸ್ ನೌ ಸಂಸ್ಥೆಯು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ, ಈ ಮೂಲಕ ಶುಭಾಶಯವನ್ನು ತಿಳಿಸುತ್ತಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BREAKING : ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ನಿಗೂಢ ಸಾವು : ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ
Drinking Water: ನಿಂತು ನೀರು ಕುಡಿಯುವುದರಿಂದ ಮೊಣಕಾಲುಗಳಿಗೆ ಹಾನಿಯಾಗುತ್ತಾ? ವಿಜ್ಞಾನ ಹೇಳೋದೇನು ಓದಿ!








