ಚಾಮರಾಜನಗರ : ಸಚಿವ ವಿ. ಸೋಮಣ್ಣ ಕಪಾಳ ಮೋಕ್ಷ ವಿವಾದ ಮತ್ತೆ ಇನ್ನೊಂದು ತಿರುವು ಪಡೆದಿದ್ದು, ಸಂಘಟನೆಗಳ ವಿರುದ್ಧವೇ ಮಹಿಳೆ ದೂರು ನೀಡಿದ್ದಾರೆ.
ಸಚಿವ ವಿ.ಸೋಮಣ್ಣ ಹಕ್ಕುಪತ್ರ ವಿತರಣೆ ವೇಳೆ ಕಪಾಳಮೋಕ್ಷ ಮಾಡಿದರೆಂಬ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ. ಹಲ್ಲೆಗೆ ಒಳಗಾದ ಆರೋಪಕ್ಕೆ ಒಳಗಾಗಿದ್ದ ಮಹಿಳೆಯೇ ಸಂಘಟನೆಗಳ ವಿರುದ್ದ ದೂರು ಕೊಟ್ಟಿದ್ದು, ಎಫ್ಐಆರ್ ದಾಖಲಾಗಿದೆ.
ಸಚಿವರು ನನ್ನ ಕೆನ್ನೆಗೆ ಹೊಡೆದಿಲ್ಲ. ನನ್ನ ಕಾಲಿಗೆ ಬೀಳಬೇಡ. ಸಮಸ್ಯೆ ಸರಿ ಮಾಡಿಸಿಕೊಡುತ್ತೇನೆ ಹೋಗು ಎಂಬುದಾಗಿ ಕೆನ್ನ ಸವರಿ ಕಳುಹಿಸಿದ್ದರು. ನಿವೇಶನಕ್ಕಾಗಿ ನಾನು ಕೆಲ ದಾಖಲಾತಿಗಳನ್ನು ಸಲ್ಲಿಸಿರಲಿಲ್ಲ. ಘಟನೆ ನಂತರ ಬಾಕಿ ಇದ್ದ ಜಾತಿ ಪ್ರಮಾಣ ಪತ್ರದ ಕೊಟ್ಟ ಕೂಡಲೇ ನನಗೆ ಮಾರನೇ ದಿನ ನಿವೇಶನ ಕೊಡುವ ವ್ಯವಸ್ಥೆಯನ್ನು ಸಚಿವರು ಮಾಡಿಸಿದರು. ಬಳಿಕ ಕೆಲ ಸಂಘಟನೆಯವರು ಎಂದು ಹೇಳಿಕೊಂಡು ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ.
ನೀನು ಕೋಟ್ಯಧಿಪತಿ ಆಗಬಹುದು. ಕೇಸು ಹಾಕು ಎಂದು ಒತ್ತಾಯಿಸುತ್ತಾರೆ, ಈ ಕಾರಣದಿಂದ ಕೂಲಿ ಕೆಲಸಕ್ಕೆ ಕೂಡ ಹೋಗಲು ಆಗುತ್ತಿಲ್ಲ. ಆದ್ದರಿಂದ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಮಂಗಳವಾರ ದೂರು ದಾಖಲಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಈ ಸಂಬಂಧ ರೈತ ಸಂಘ, ನಾಯಕ ಹಿತ ರಕ್ಷಣಾ ವೇದಿಕೆ, ಮಹಿಳಾ ಸಂಘಟನೆ, ಡಿಎಸ್ಎಸ್, ಕೆ ಆರ್ ಎಸ್ ಪಕ್ಷದ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಸೋಮಣ್ಣ ವಿರುದ್ಧ ಕಾಂಗ್ರೆಸ್ ದೂರು
ಗುಂಡ್ಲುಪೇಟೆಯಲ್ಲಿ ಸಚಿವ ವಿ. ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಮಹಿಳಾ ಆಯೋಗಕ್ಕೆ ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ದೂರು ನೀಡಿದೆ.
ವಿ ಸೋಮಣ್ಣ ಅವರು ಹಕ್ಕು ಪತ್ರ ವಿತರಣಾ ಕಾರ್ಯಕ್ರಮದ ಸಂದರ್ಭದಲ್ಲಿ ಮಹಿಳೆಯೊಬ್ಬರು ಮನವಿ ಪತ್ರ ಸಲ್ಲಿಸಲು ಬರುತ್ತಿದ್ದ ಸಂದರ್ಭದಲ್ಲಿ ಕೋಪಗೊಂಡು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳದಲ್ಲೇ ಇದ್ದ ಅಧಿಕಾರಿ ವರ್ಗ ಹಾಗೂ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿ ಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಮಹಿಳಾ ಆಯೋಗ ಕೂಡಲೇ ಪ್ರಕರಣ ದಾಖಲಿಸಿಕೊಂಡು ನಿಷ್ಪಕ್ಷಪಾತವಾಗಿ ಈ ಪ್ರಕರಣವನ್ನು ತನಿಖೆ ನಡೆಸಬೇಕು. ಮಹಿಳೆ ಮೇಲೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಕಾನೂನು ರೀತಿಯ ಕ್ರಮವನ್ನು ಸಚಿವ ವಿ ಸೋಮಣ್ಣ ವಿರುದ್ಧ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ವೈ ಪುಟ್ಟರಾಜು ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ಸಲ್ಲಿಸಿ ಸಚಿವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
BIG NEWS: ʻನಾನು ಆತನ ಹೆಂಡ್ತಿʼ ಎಂದ ಅತ್ಯಾಚಾರ ಸಂತ್ರಸ್ತೆ: ʻಪೋಕ್ಸೋʼ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್
BIGG NEWS : ಗೌರಿ ಲಂಕೇಶ್ ಹತ್ಯೆ ಪ್ರಕರಣ : ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
BIGG NEWS : ಕರ್ನಾಟಕದ ಎರಡು ಕಡೆ ‘ಮಲ್ಲಿಕಾರ್ಜುನ ಖರ್ಗೆ ಬೃಹತ್ ಅಭಿನಂದನಾ ಸಮಾವೇಶ’ |Mallikarjuna Kharge