ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಸೋಮಣ್ಣ ಕಪಾಳ ಮೋಕ್ಷ ಮಾಡಿಲ್ಲ..ಕಪಾಳ ಸವರಿದ್ದಾರೆ. ಅದನ್ನೆ ಅಲ್ಲಿನ ಸತೀಶ್ ಎಂಬುವವರು ತಿರುಚಿ ವಿಡಿಯೊ ಹರಿಯಬಿಡಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ.
ಹಕ್ಕು ಪತ್ರ ವಿತರಣೆ ಸಂದರ್ಭದಲ್ಲಿ ಬಂದ ಮಹಿಳೆಗೆ ಕಪಾಳ ಮೋಕ್ಷ ಮಾಡಿದ ವಿಡಿಯೊ ರಾಜ್ಯ ಮಟ್ಟದ ಸುದ್ದಿ ಮಾಡಿ ಸದ್ದು ಮಾಡಿತು..ಆದರೆ ಇಂದು ನಡೆದ ಪತ್ರಿಕಾಘೊಷ್ಟಿಯಲ್ಲಿ ಬಿಜೆಪಿ ಮುಖಂಡರೊಬ್ಬರು ಮಹಿಳೆಗೆ ಕಪಾಳ ಮೋಕ್ಷ ಮಾಡದೆ ಇರೊದ್ನ ಎಡಿಟ್ ಮಾಡಿ ಸಚಿವ ಸೋಮಣ್ಣ ಅವರಿಗೆ ಬುದ್ದಿ ಕಲಿಸುತ್ತೇವೆ ಎಂದು ಅಲ್ಲಿರುವ ಸತೀಶ್ ಕರೆ ಮಾಡಿ ತಿಳಿಸಿದ್ದಾನೆ ಎಂದರಲ್ಲದೆ ಸತೀಶ್ ಎಂಬುವವರ ಮೇಲೆ ವೈಯುಕ್ತಿಕ ನಿಂದನೆ ಆರೋಪವನ್ನ ಇದೆ ಸಂದರ್ಭದಲ್ಲಿ ಹೇಳಿದ್ದಾರೆ. ಈ ಸಂಬಂದ ಸತೀಶ್ ಎಂಬುವವರು ಸಂಪರ್ಕಿಸಿದಾಗ ವಿಡಿಯೊ ಎಡಿಟ್ ಮಾಡಿ ತಿರುಚಲು ಸಾದ್ಯವೆ..ಆಗಿದ್ದರೆ ಸೋಮಣ್ಣ ಅವರೆ ಯಾಕೆ ಕಲಾಳ ಮೋಕ್ಷ ಮಾಡಬೇಕು ಅದರ ಮುಖದ ಬದಲು ಮುಖ್ಯಮಂತ್ರಿ ಹೊಡೆದರೆಂದು ಎಡಿಟ್ ಮಾಡಿ ಬಿಂಬಿಸಬಹುದಲ್ಲವೆ.? ತಿಳಿದ ಜನ ಏನನ್ನಬಲ್ಲರು.ವಾಸ್ತವ ತಿರುಚಲು ಸಾದ್ಯವೆ? ಅಷ್ಟಕ್ಕು ಹಣದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಮಾಡಿದ್ದಾರೆ ತಾಕತ್ತಿದ್ದರೆ ಆಡಿಯೊ ರಿಲೀಸ್ ಮಾಡಲಿ.ನ್ಯಾಯಾಲಯ ಹಾಗೂ ಕಾನೂನು ಶಿಕ್ಷೆ ನೀಡುತ್ತದೆ ಅದು ಬಿಟ್ಟು ಸಾಕ್ಷಿ ಇಲ್ಲದ ತೇಜೋವದೆ ಸರಿಯಲ್ಲ..ಕಾನೂನು ತಜ್ಞರೊಂದಿಗೆ ಚರ್ಚಸಿ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರ.