ಉತ್ತರಕಾಶಿ : ಉತ್ತರಕಾಶಿಯಲ್ಲಿ ಸಂಭವಿಸಿದ ಹಿಮಕುಸಿತಕ್ಕೆ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್ಐಎಂ) ಪರ್ವತಾರೋಹಿಗಳ ತಂಡ ಸಿಲುಕಿತ್ತು. ಸತತ ಮೂರು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು 7 ಮೃತದೇಹಗಳು ಪತ್ತೆಯಾಗಿವೆ. ಈ ಮೂಲಕ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಕಾಣೆಯಾದ ಇತರ ಮೂವರು ಪ್ರಶಿಕ್ಷಣಾರ್ಥಿಗಳಿಗಾಗಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಎನ್ಐಎಮ್ (NIM) ಹೇಳಿದೆ.
ಮಂಗಳವಾರ NIM ನ 61 ಸದಸ್ಯರ ತರಬೇತಿ ತಂಡವು ತಮ್ಮ ಶಿಬಿರಕ್ಕೆ ಹಿಂದಿರುಗುತ್ತಿದ್ದ ವೇಳೆ ಹಿಮಪಾತ ಸಾವಿರ ಅಡಿ ಎತ್ತರದಲ್ಲಿರುವ ದ್ರೌಪದಿ ಶಿಖರದಲ್ಲಿ ಅಪ್ಪಳಿಸಿತ್ತು. ಕಾರ್ಯಾಚರಣೆಯಲ್ಲಿ 19 ಮೃತದೇಹಗಳನ್ನು ಹೊರತೆಗೆಯಲಾಗಿದೆ.
Uttarkashi Avalanche | Till now, 26 bodies have been recovered. Search and rescue operation is in progress for the remaining 3 trainees: Nehru Institiute of Mountaineering (NIM) pic.twitter.com/fOWDYU0k4k
— ANI UP/Uttarakhand (@ANINewsUP) October 7, 2022
ಐಟಿಬಿಪಿ, ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್, ಏರ್ ಫೋರ್ಸ್, ಆರ್ಮಿ, ಎಸ್ಡಿಆರ್ಎಫ್ ಮುಂತಾದ ವಿವಿಧ ತಂಡಗಳ ಒಟ್ಟು 30 ಜನರನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
Uttarkashi Avalanche | Till now, 19 bodies have been recovered. Rescue operation is underway by teams of NDRF, SDRF, ITBP, Indian Army, and district administration. I'm also monitoring the rescue operation: Uttarakhand CM Pushkar Singh Dhami pic.twitter.com/BiyITrdEMY
— ANI UP/Uttarakhand (@ANINewsUP) October 7, 2022