ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ( Border Roads Organisation -BRO) ಯೋಜನೆಯ ಸ್ಥಳದಲ್ಲಿ ಭಾನುವಾರ ಇನ್ನೂ ನಾಲ್ಕು ಶವಗಳು ಪತ್ತೆಯಾಗಿವೆ. ಹೀಗಾಗಿ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಹಿಮಪಾತವು ಕಾರ್ಮಿಕರು ವಾಸಿಸುವ ವಸತಿಗೃಹಗಳಾಗಿ ಬಳಸುತ್ತಿದ್ದ ಕಂಟೇನರ್ ಗಳನ್ನು ಹೂಳಿದಾಗ ಯೋಜನಾ ಸ್ಥಳದಲ್ಲಿ 54 ಕಾರ್ಮಿಕರು ಇದ್ದರು. ಮೃತಪಟ್ಟ ಎಂಟು ಮಂದಿಯನ್ನು ಹೊರತುಪಡಿಸಿ, ಉಳಿದವರೆಲ್ಲರನ್ನೂ ರಕ್ಷಿಸಲಾಗಿದೆ ಅಥವಾ ಸುರಕ್ಷಿತವಾಗಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಶೋಧ ಕಾರ್ಯಾಚರಣೆ ಅಂತ್ಯಗೊಂಡಿದೆ.
ಈ ಬಗ್ಗೆ ಭಾರತೀಯ ಸೇನೆಯ ಎಡಿಜಿಪಿಐ ಟ್ವೀಟ್ ಮಾಡಿ, “ಮಾನಾ ಹಿಮಪಾತದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇಂದು ಮುಕ್ತಾಯಗೊಂಡಿದ್ದು, 46 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಅವರಿಗೆ ಪ್ರಸ್ತುತ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಆದಾಗ್ಯೂ, ಶೋಧ ಮತ್ತು ಪಾರುಗಾಣಿಕಾ ತಂಡಗಳ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಹಗಲು ರಾತ್ರಿ ನಿರಂತರ ಪ್ರಯತ್ನಗಳ ಹೊರತಾಗಿಯೂ, 8 ಜೀವಗಳನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದಿದೆ.
ADGPI Indian Army tweets, "Search and rescue operations at the Mana Avalanche site concluded today with 46 workers being rescued successfully who are currently being given necessary medical treatment. However, despite relentless efforts, day & night, through inclement conditions… pic.twitter.com/7F7DSeqWHa
— ANI (@ANI) March 2, 2025
ಸೇನೆಯ ಐದು, ವಾಯುಪಡೆಯ ಎರಡು ಮತ್ತು ಸೇನೆಯಿಂದ ಬಾಡಿಗೆಗೆ ಪಡೆದ ಒಂದು ನಾಗರಿಕ ಹೆಲಿಕಾಪ್ಟರ್ ಸೇರಿದಂತೆ ಎಂಟು ಹೆಲಿಕಾಪ್ಟರ್ಗಳು ಹಿಮಪಾತದ ಸ್ಥಳದ ಬಳಿಯ ಮಾನಾ ಪೋಸ್ಟ್ನಿಂದ ರಕ್ಷಿಸಲ್ಪಟ್ಟ ಎಲ್ಲರನ್ನು ಜೋಶಿಮಠ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಿವೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
12 ಜ್ಯೋತಿರ್ ಲಿಂಗಗಳಲ್ಲಿ ಒಂದಾದ ಸೋಮನಾಥ ಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ, ಪೂಜೆ ಸಲ್ಲಿಕೆ | PM Modi
Watch Video: ಆರೋಗ್ಯಕ್ಕೆ ಸೊಪ್ಪು ಒಳ್ಳೇದು ಅಂತ ತಿನ್ನುತ್ತೀರಾ.? ಅದಕ್ಕೂ ಮುನ್ನಾ ಈ ಆಘಾತಕಾರಿ ವೀಡಿಯೋ ನೋಡಿ
BREAKING : ಬಿಜೆಪಿಗಿಂತಲೂ ಕಾಂಗ್ರೆಸ್ ನಲ್ಲಿ ಹೆಚ್ಚು ಕಮಿಷನ್ : ಗುತ್ತಿಗೆದಾರರ ಸಂಘ ಗಂಭೀರ ಆರೋಪ!