ಉತ್ತರಕನ್ನಡ : ಬೇಸಿಗೆ ಹೆನಲೆಯಲ್ಲಿ ಸಹಜವಾಗಿ ಜನರು ಜಲಪಾತ ಅಥವಾ ಹೆಚ್ಚು ನೀಡಿರುವ ಸ್ಥಳಗಳಿಗೆ ತೆರಳು ಬಯಸುತ್ತಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೋಂಡಿ ಜಲಪಾತಕ್ಕೆ ಪ್ರವಾಸಿಗರು ಬೇಡಿ ನೀಡಿದ ವೇಳೆ ಅವರ ಮೇಲೆ ಜೇನುಹುಳುಗಳು ದಾಳಿ ಮಾಡಿವೆ ಈ ವೇಳೆ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೋಡ್ಡಿ ಜಲಪಾತ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರ ಮೇಲೆ ಜೇನು ಹುಳುಗಳು ದಾಳಿ ಮಾಡಿವೆ. ಇದರಿಂದ 30ಕ್ಕೂ ಹೆಚ್ಚು ಪ್ರವಾಸಿಗರಿಗೆ ಗಾಯಗಳಾಗಿದ್ದು ತಕ್ಷಣ ಸ್ಥಳೀಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಪ್ರವಾಸಿಗರು ಆಟವಾಡಲು ಜಲಪಾತಕ್ಕೆ ಇಳಿದಿದ್ದರು ಎನ್ನಲಾಗಿದೆ. ಸಾದೊಡ್ಡಿ ಜಲಪಾತದ ಬಳಿಗೆ ಪ್ರವಾಸಿಗರ ಮೇಲೆ ಜೆನು ದಾಳಿ ನಡೆಸಿದೆ. ಜೇನು ದಾಳಿ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದ ಇದೀಗ ನಿರ್ಬಂಧ ವಿಧಿಸಲಾಗಿದೆ. ಬೀಷೆ ಗೌಡ ಗ್ರಾಮಸ್ನಲ್ಲಿ ಬ್ಯಾನರ್ ಅಳವಡಿಸಿ ಅರಣ್ಯ ಇಲಾಖೆ ಪ್ರವಾಸಿಗರಿಗೆ ಸೂಚನೆ ನೀಡಿದೆ ಹೀಗಾಗಿ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಬೇಸರದಿಂದ ವಾಪಸ್ ತೆರಳಿದ್ದಾರೆ.