ಉತ್ತರಕನ್ನಡ : ತನ್ನ ಮದುವೆಯಾಗಿಲ್ಲ ಎಂದು ಮಾನಸಿಕವಾಗಿ ಮನನೊಂದಿದ್ದ ಯುವಕನೊಬ್ಬ ತಾನು ಮಲಗುವ ಕೋಣೆಯಲ್ಲಿ ನೇಣು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಸ್ತೂರಬಾ ನಗರದಲ್ಲಿ ನಡೆದಿದೆ.
ಕಸ್ತೂರಬಾನಗರದ ಇಬ್ರಾಹಿಂ ಬಾಷಾಸಾಬ ಮಲ್ಲಕ್ಕನವರ(25) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಹೇಳಲಾಗುತ್ತಿದ್ದು, ಈತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ ಆದರೆ ಆಕೆಗೆ ತನ್ನ ಗಂಡನಿಂದ ವಿಚ್ಛೇದನ ದೊರೆಯಲು ವಿಳಂಬವಾಗಿದ್ದರಿಂದ, ಮಹಿಳೆ ಜೊತೆ ತನ್ನ ವಿವಾಹ ಆಗುವುದಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡು ತನ್ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ವೇಳೆ ತಕ್ಷಣ ಕುಟುಂಬಸ್ಥರು ಆತನನ್ನು ಚಿಕಿತ್ಸೆಗೆ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಈ ಕುರಿತಂತೆ ತಾಯಿ ಸಾಹೀರಬಾನು ಬಾಷಾಸಾಬ ಮಲ್ಲಕ್ಕನವರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.