ಉತ್ತರಕನ್ನಡ : ಸಂಸದ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಅನಧಿಕೃತ ಮಸೀದಿಗಳನ್ನು ತೆರವುಗೊಳಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಅನಧಿಕೃತ ಮಸೀದಿ ತೆರವು ಕುರಿತಾಗಿ ಭಟ್ಕಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಮನವಿ ಸಲ್ಲಿಕೆಯಾಗಿದ್ದು. ಅನಧಿಕೃತ ಮಸೀದಿ ತೆರುವುಗೊಳಿಸುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಜಾಲಿ ಪಟ್ಟಣದಲ್ಲಿ ನಿರ್ಮಿಸಿರುವ ಅನಧಿಕೃತ ಮಸೀದಿಗೆ ತೆರವಿಗೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿನ ಮಸೀದಿ ತೆರವಿಗೆ ಮನವಿ ಸಲ್ಲಿಸಿದ್ದಾರೆ. ಮದರಸಾ ಉದೇಶಕ್ಕಾಗಿ ಕಟ್ಟಡದ ಪರವಾನಿಗೆ ಪಡೆಯಲಾಗಿತ್ತು.ಆದರೆ ಕಟ್ಟಡದ ಎರಡನೇ ಮಹಡಿಯಲ್ಲಿ ಮಸೀದಿಯಾಗಿ ಪರಿವರ್ತನೆ ಮಾಡಲಾಗಿದೆ.ಅನಧಿಕೃತ ಮಸೀದಿ ನಿರ್ಮಿಸುವುದನ್ನು ತೆರುಗುಗೊಳಿಸಲು ಹಿಂದೂ ಕಾರ್ಯಕರ್ತರು ಅಗ್ರಹಿಸಿದ್ದಾರೆ.
ಅದರಂತೆ ಜಾಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಈ ಕುರಿತಂತೆ ಮನವಿ ಸಲ್ಲಿಸಿವೆ. ಕಟ್ಟಡದ ಎರಡನೇ ಮಹಡಿಗೆ ಯಾವುದೇ ಪರವಾನಿಗೆ ಪಡೆಯದೆ ನಿರ್ಮಾಣ ಮಾಡಲಾಗಿದೆ. ಮಸೀದಿಯಲ್ಲಿರುವ ಮೈಕ್ ಗಳನ್ನು ತೆರವುಗೊಳಿಸಲು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೂ ನಾವು ಏನು ಮಾಡುವುದಿಲ್ಲ.22ರ ಒಳಗೆ ತೆರವುಗೊಳಿಸಲು ಅಧಿಕಾರಿಗೆ ತಿಳಿಸಿದ್ದು, ಅದರ ಬಳಿಕ ಮಸೀದಿ ತೆರೆವುಗೋಳಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಇದರಿಂದ ಸದ್ಯ ಜಾಲಿ ಪಟ್ಟಣದಲ್ಲಿ ಪ್ರತಿಭಟನೆ ಕೈಬಿಟ್ಟ ಹಿಂದೂ ಸಂಘಟನೆ ಕಾರ್ಯಕರ್ತರು ಯಾವ ಇಲಾಖೆಗೆ ಜಾಗ ಸೇರಿದೆ ಎಂದು ಪರಿಶೀಲನೆ ನಡೆಸಲಾಗುತ್ತದೆ.ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದ್ದರೆ ಇಂದೇ ಪತ್ರ ಬರೆಯುತ್ತೇನೆ.ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಮುಖ್ಯಾಧಿಕಾರಿ ಮಂಜಪ್ಪ ತಿಳಿಸಿದರು.