ಬರೇಲಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಹುಡುಗಿಯರು ತಾವು ಪ್ರೀತಿಸಿದ ಹಿಂದೂ ಹುಡುಗರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಇರಾಮ್ ಜೈದಿ ಸ್ವಾತಿ ಮತ್ತು ಶಹನಾಜ್ ಸುಮನ್ ಆದಳು. ಮದಿನಾಥದಲ್ಲಿರುವ ಅಗಸ್ಟ್ ಮುನಿ ಆಶ್ರಮದಲ್ಲಿ ಪಂಡಿತ್ ಕೆ ಕೆ ಶಂಖಧರ್ ಅವರು ಹಿಂದೂ ಸಂಪ್ರದಾಯದಂತೆ ವಿವಾಹವನ್ನು ನೆರವೇರಿಸಿದರು. ಸ್ವಾತಿ ಆದೇಶ್ ಕುಮಾರ್ ಅವರನ್ನು ವಿವಾಹವಾದರು ಮತ್ತು ಸುಮನ್ ಅಜಯ್ ಎಂಬುವರನ್ನು ವಿವಾಹವಾದರು.
ಈ ಇಬ್ಬರೂ ಹುಡುಗಿಯರು ತಮಗೆ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಇದೆ ಎಂದು ಹೇಳಿದರು. “ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಸಿಗುವುದಿಲ್ಲ. ಮುಸ್ಲಿಂ ಪುರುಷರು ಬಯಸಿದಾಗ, ಅವರು ಮೂರು ಬಾರಿ ತಲಾಖ್ ಅನ್ನು ಉಚ್ಚರಿಸಿ ವಿಚ್ಛೇದನ ನೀಡಿ ಹಲಾಲ ಸಂಸ್ಕಾರಕ್ಕೊಳಗೊಂಡು ಪುನಃ ತಾವು ವಿಚ್ಛೇದನ ನೀಡಿದ ಹೆಂಡತಿಯನ್ನು ಸೇರಿಸಿಕೊಳ್ಳುತ್ತಾರೆ’ ಎಂದು ಯುವತಿಯರು ಹೇಳಿದ್ದಾರೆ.
ಇಬ್ಬರು ಹುಡುಗಿಯರನ್ನು ಮೊದಲು ಪುರೋಹಿತರು ಶುದ್ಧೀಕರಿಸಿ ಹೆಸರುಗಳನ್ನು ಬದಲಾಯಿಸಿದ ನಂತರವೇ ಮದುವೆ ಶಾಸ್ತ್ರ ಪೂರೈಸಿದರು. ಮದುವೆ ಸಮಾರಂಭ ಪೂರ್ಣಗೊಂಡ ನಂತರ ವಧುಗಳು ಅರ್ಚಕರಿಂದ ಆಶೀರ್ವಾದ ಪಡೆದರು.
ಮದುವೆಯ ಕೆಲವು ಗಂಟೆಗಳ ನಂತರ ಯುವತಿಯರು ಬರೇಲಿಯ ಎಸ್ಎಸ್ಪಿ ಅವರನ್ನು ಭೇಟಿ ಮಾಡಿ, ಪೋಷಕರು ಮತ್ತು ಸಹೋದರರಿಂದ ನಮಗೆ ಜೀವಭಯವಿದೆ ಎಂದು ದೂರಿದರು. ಕುಟುಂಬಸ್ಥರು ತಮಗಾಗಿ ಸಮಾಧಿಯನ್ನು ಸಿದ್ಧಪಡಿಸಿರುವ ಆಘಾತಕಾರಿ ಸಂಗತಿಯನ್ನು ಪೊಲೀಸ್ ಅಧಿಕಾರಿಗೆ ತಿಳಿಸಿದರು. ಯುವತಿಯರಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
BIGG NEWS : ಬಾಗಲಕೋಟೆ ಜಿಲ್ಲೆಯಲ್ಲೂ 64 ಸಾವಿರ ಮತದಾರರ ಹೆಸರು ನಾಪತ್ತೆ : ಎಸ್.ಜಿ.ನಂಜಯ್ಯನಮಠ ಗಂಭೀರ ಆರೋಪ
BIGG NEWS : ದಾವಣಗೆರೆಯಲ್ಲಿ ಕಾರು-ಬೈಕ್ ನಡುವೆ ಭೀಕರ ಅಪಘಾತ : ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರ ಸಾವು
WATCH VIDEO: ನೀರಿನ ಮೇಲೆ ನಡೆದುಕೊಂಡೇ ಹೋಗಿ ದಡ ಸೇರಿದ ಹಲ್ಲಿ… ವೀಡಿಯೊ ವೈರಲ್
BIGG NEWS : ಬಾಗಲಕೋಟೆ ಜಿಲ್ಲೆಯಲ್ಲೂ 64 ಸಾವಿರ ಮತದಾರರ ಹೆಸರು ನಾಪತ್ತೆ : ಎಸ್.ಜಿ.ನಂಜಯ್ಯನಮಠ ಗಂಭೀರ ಆರೋಪ