ಉತ್ತರಪ್ರದೇಶ : ಕಳೆದ ನವೆಂಬರ್ 24 ರಂದು ಉತ್ತರಪ್ರದೇಶದ ಫರೀದ್‌ಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಕಾರು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದರು. ಇದೀಗ ಅಂತದ್ದೇ ಮತ್ತೊಂದು ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ಅನ್ನು ನಂಬಿ ಕಾರು ಚಾಲಕನೊಬ್ಬ ನೀರು ಇಲ್ಲದಂತಹ ಕಾಲುವೆಗೆ ಕಾರನ್ನು ನುಗ್ಗಿಸಿದ್ದಾನೆ. ಪರಿಣಾಮ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಉತ್ತರಪ್ರದೇಶದ ಬರೆಲಿಯಲ್ಲಿ ನಡೆದಿದೆ.
ಹೌದು ಗೂಗಲ್ ತೋರಿಸಿದ ಶಾರ್ಟ್ಕಟ್ ಮಾರ್ಗವನ್ನು ನಂಬಿ ಹೋಗಿ ವ್ಯಕ್ತಿಯೊಬ್ಬ ಕಾರು ಸಮೇತ ಕಾಲುವೆಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗೂಗಲ್ ತೋರಿಸಿದ ಶಾರ್ಟ್ಕಟ್ ನಂಬಿ ಕಾರು ತೆಗೆದುಕೊಂಡು ಹೋಗಿದ್ದ ಚಾಲಕ ಒಣ ಕಾಲುವೆಗೆ ಇಳಿಸಿದ್ದಾರೆ. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ಬರೇಲಿಯಿಂದ ಪಿಲಿಭಿತ್‌ಗೆ ಪ್ರಯಾಣಿಸುತ್ತಿದ್ದಾಗ ಕಾಲಾಪುರ ಗ್ರಾಮದ ಬಳಿ ಗೂಗಲ್ ಮ್ಯಾಪ್ ಹಾಕಿದ್ದಾರೆ ಆಗ ಅದು ಶಾರ್ಟ್ ಕಟ್ ಮಾರ್ಗವೊಂದನ್ನು ತೋರಿಸಿತ್ತು. ಅದರ ಮೂಲಕ ಹೋಗಿ ನೇರವಾಗಿ ಕಾಲುವೆಗೆ ಹಾರಿದ್ದಾರೆ. ಗ್ರಾಮಸ್ಥರು ಅವರನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿದಾಗ ಅವರನ್ನು ರಕ್ಷಿಸಲಾಯಿತು. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.