ಮೀರತ್(ಉತ್ತರ ಪ್ರದೇಶ): ಊಟ ಮಾಡಲು ಒಂದೊಳ್ಳೆ ಜಾಗ ಸಿಕ್ರೆ ಸಾಕು. ಅಲ್ಲೇ ಕೂತು ಆರಾಮಾಗಿ ಊಟ ಮಾಡ್ಬೋದು. ಏನಾದ್ರೂ, ಆ ಜಾಗ ಚೆನ್ನಾಗಿಲ್ಲ ಅಂದ್ರೆ, ಯಾರಿಗೆ ತಾನೇ ಹೊಟ್ಟೆಗೆ ಊಟ ಸೇರುತ್ತೆ ಹೇಳಿ. ಆದ್ರೆ, ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಇಲ್ಲಿ ತಿನ್ನೋ ಅನ್ನವನ್ನ ಟಾಯ್ಲೆಟ್ ನೆಲದ ಮೇಲೆ ಇಡಲಾಗಿದ್ದು, ಅದರ ವಿಡಿಯೋ ವೈರಲ್ ಆಗುತ್ತಿದೆ.
ಹೌದು, ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಜ್ಯ ಮಟ್ಟದ U-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಸುಮಾರು 200 ಆಟಗಾರರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಬೇಯಿಸಿದ ಅನ್ನವನ್ನು ಅಲ್ಲಿದ್ದ ಶೌಚಾಲಯದಲ್ಲಿ ಇಡಲಾಗಿತ್ತು. ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಸಹರಾನ್ಪುರದ ಕ್ರೀಡಾ ಕ್ರೀಡಾಂಗಣದಲ್ಲಿದ್ದ ಶೌಚಾಲಯದೊಳಗಿನ ನೆಲದ ಮೇಲೆ ಬೇಯಿಸಿದ ಅನ್ನವನ್ನು ದೊಡ್ಡ ತಟ್ಟೆಯಲ್ಲಿ ಹಾಕಿ ಇಡಲಾಗಿದೆ. ಇನ್ನೂ, ಅಲ್ಲೇ ಪಕ್ಕಲ್ಲಿ ಕಾಗದದ ತುಂಡೊಂದರ ಮೇಲೆ ಬೇಯಿಸಿದ ಪೂರಿಗಳನ್ನು ಇಟ್ಟಿದ್ದಾರೆ. ಕೆಲವು ಆಟಗಾರ ಅಲ್ಲಿಗೆ ಬಂದು ತಟ್ಟೆಗೆ ಅನ್ನ ಹಾಕಿಕೊಳ್ಳುವುದನ್ನು ನೋಡಬಹುದು.
#WATCH | #UttarPradesh: ‘Rice plate on toilet floor served to kabaddi players in Saharanpur’ pic.twitter.com/S5VSIf569F
— TOI Lucknow News (@TOILucknow) September 18, 2022
ಶನಿವಾರ ಆರೋಪಗಳನ್ನು ತಳ್ಳಿಹಾಕಿದ ಸಹರಾನ್ಪುರದ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಇದನ್ನು ಸಂಪೂರ್ಣವಾಗಿ ಆಧಾರರಹಿತ ಎಂದ್ದಾರೆ. ಇಲ್ಲಿ ಆಟಗಾರರಿಗೆ ನೀಡುವ ಆಹಾರ ಉತ್ತಮ ಗುಣಮಟ್ಟದ್ದಾಗಿದೆ. ಈಜುಕೊಳದ ಬಳಿ ಸಾಂಪ್ರದಾಯಿಕ ಇಟ್ಟಿಗೆ ಒಲೆಯಲ್ಲಿ ಅಕ್ಕಿ, ದಾಲ್ ಮತ್ತು ಸಬ್ಜಿ ಸೇರಿದಂತೆ ಆಹಾರವನ್ನು ದೊಡ್ಡ ಪಾತ್ರೆಗಳಲ್ಲಿ ಬೇಯಿಸಲಾಗುತ್ತದೆ ಎಂದು ಆಟಗಾರ ಹೇಳಿಕೊಂಡಿದ್ದಾರೆ.
ಕೆಲವು ಆಟಗಾರರು ಕ್ರೀಡಾಂಗಣದ ಅಧಿಕಾರಿಯ ಮುಂದೆ ವಿಷಯ ಪ್ರಸ್ತಾಪಿಸಿದರು. ಅಧಿಕಾರಿಗಳು ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಅವರಿಗೆ ಮಾಹಿತಿ ನೀಡಿದರು. ಸ್ಥಳಾವಕಾಶದ ಕೊರತೆ ಉಂಟಾಗಿದ್ದು, ಕ್ರೀಡಾಂಗಣದ ಪೂಲ್ ಬಳಿಯೇ ಅಡುಗೆ ಮಾಡಲಾಗಿದೆ ಎಂದು ಕ್ರೀಡಾ ಅಧಿಕಾರಿ ತಿಳಿಸಿದ್ದಾರೆ.
Good News : ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಗೌರವಧನ ಬಿಡುಗಡೆ
BIGG NEWS: CM ಬೊಮ್ಮಾಯಿ ಭೇಟಿಯಾದ ಕೇರಳದ ಸಿಎಂ ಪಿಣರಾಯಿ ವಿಜಯನ್; ರೈಲ್ವೆ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ