ಮೀರತ್ (ಉತ್ತರ ಪ್ರದೇಶ): ಹೆಚ್ಚಿನವರು ರಸ್ತೆ ಬದಿ ತಯಾರಾಗುವ ಆಹಾರಗಳನ್ನು ತಿನ್ನಲು ಬಯಸುತ್ತಾರೆ. ಆದ್ರೆ, ಆಹಾರ ತಯಾರಿಸುವವರು ಎಷ್ಟರ ಮಟ್ಟಿಗೆ ಗುಣಮಟ್ಟ ಕಾಪಾಡುತ್ತಾರೆ ಎಂದು ಯಾರಿಗೂ ತಿಳಿದಿರುವುದಿಲ್ಲ.
ಆದ್ರೆ, ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆ ಬದಿಯ ಅಂಗಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ರೊಟ್ಟಿಯನ್ನ ತಯಾರಿಸುತ್ತಿದ್ದಾರೆ. ಈ ವೇಳೆ ಸೂಕ್ಷ್ಮವಾಗಿ ಗಮನಿಸಿದರೆ, ರೊಟ್ಟಿ ಮಾಡುವವ ರೊಟ್ಟಿಗೆ ತನ್ನ ಎಂಜಿಲನ್ನು ಉಗಿಯುವುದನ್ನು ನೋಡಬಹುದು.
आदरणीय परम् पूजनीय @myogiadityanath
महाराज जीवायरल वीडियो मेरठ के मवाना थाना क्षेत्र के रॉयल होटल का बताया जा रहा है जहां शोएब नाम का युवक थूक लगाकर रोटी सेक रहा है।@meerutpolice प्रकरण का संज्ञान लेकर कार्रवाई सुनिश्चित करने की कृपया करें।@Uppolice @dgpup pic.twitter.com/0abfMO2ROf
— Navnirman Hindu Sena Parishad -NHSP (@nhsp_india) December 17, 2022
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಈ ಸುದ್ದಿ ಪೊಲೀಸರ ಗಮನಕ್ಕೆ ಬಂದಿದೆ. ಇದಾದ ನಂತ್ರ, ಮಾವಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಕಳವಳಕಾರಿ. ಆದರೆ, ಯುಪಿ ನಗರಕ್ಕೆ ಹೊಸದೇನಲ್ಲ. ಅಡುಗೆ ಪ್ರಕ್ರಿಯೆಯಲ್ಲಿ ತೊಡಗಿರುವವರು ಅದರಲ್ಲೂ ರೊಟ್ಟಿಗೆ ಉಗುಳು ಬೆರೆಸಿದ ಘಟನೆಗಳು ಈ ಹಿಂದೆಯೂ ನಡೆದಿವೆ. ಅಂತಹುದರಲ್ಲಿ, ಮಾಧ್ಯಮ ಮತ್ತು ನೆಟಿಜನ್ಗಳ ಗಮನ ಸೆಳೆದ ಪ್ರಕರಣವೆಂದರೆ, ಮೀರತ್ನಲ್ಲಿ ಬಾಣಸಿಗ ಮದುವೆ ಸಮಾರಂಭದಲ್ಲಿ ‘ರೊಟ್ಟಿ’ ಮಾಡುವಾಗ ಹಿಟ್ಟಿನ ಮೇಲೆ ಉಗುಳುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿತ್ತು.
ʻಪ್ರಾರ್ಥನೆʼ ಮಾಡುವ ನಿಜವಾದ ಉದ್ದೇಶವೇನು? ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಮಾಹಿತಿ
BIGG NEWS : ಬೆಳಗಾವಿ ಅಧಿವೇಶನದಲ್ಲಿ ಕೆಲವು ಮಹತ್ವದ ಬಿಲ್ ಮಂಡನೆ : ಸಿಎಂ ಬೊಮ್ಮಾಯಿ
ʻಪ್ರಾರ್ಥನೆʼ ಮಾಡುವ ನಿಜವಾದ ಉದ್ದೇಶವೇನು? ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಮಾಹಿತಿ