ವಾರಣಾಸಿ(ಉತ್ತರ ಪ್ರದೇಶ): ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಬೆನ್ನಲ್ಲೇ ಮಂಗಳವಾರ ಅಜಂಗಢದ ಅಹ್ರೌಲಾ ಪ್ರದೇಶದ ಬಾವಿಯಲ್ಲಿ ಮಹಿಳೆಯೊಬ್ಬರ ದೇಹದ ತುಂಡರಿಸಿದ ಭಾಗಗಳು ಪತ್ತೆಯಾಗಿವೆ.
ದೆಹಲಿಯಲ್ಲಿ ಫುಡ್ ಬ್ಲಾಗರ್ ಅಫ್ತಾಬ್ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಗರದಾದ್ಯಂತ ಎಸೆದಿದ್ದ. ಈ ಘಟನೆ ಮಾಸುವ ಮುನ್ನವೇ ಅಂತದ್ದೇ ಒಂದು ಘಟನೆ ಅಜಂಗಢದಲ್ಲಿ ನಡೆದಿದೆ.
ಅಜಂಗಢದ ದುರ್ವಾಸ-ಗಹಾಜಿ ರಸ್ತೆಯ ಪಶ್ಚಿಮ ಕಾ ಪುರ ಗ್ರಾಮದ ಬಾವಿಯಲ್ಲಿ ಕತ್ತರಿಸಿದ ಕೈ, ಕಾಲುಗಳು ಮತ್ತು ಮುಂಡವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಬಲಿಪಶುವಿನ ತಲೆ ಕಾಣೆಯಾಗಿದೆ.
ಮಂಗಳವಾರ ಬೆಳಗ್ಗೆ ಪಶ್ಚಿಮ ಕಾ ಪುರ ಗ್ರಾಮದಿಂದ ಸುಮಾರು 150 ಮೀಟರ್ ದೂರದಲ್ಲಿರುವ ಬಾವಿಯಲ್ಲಿ ಶವವನ್ನು ಸ್ಥಳೀಯ ಗ್ರಾಮಸ್ಥರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಹ್ರಾಲಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಬಾವಿಯೊಳಗೆ ಕಾಲುಗಳು ಮತ್ತು ಕೈಗಳು ಅದರ ಬಳಿ ತೇಲುತ್ತಿರುವಾಗ ದೇಹದ ಮೇಲೆ ಕೇವಲ ಒಂದು ಒಳ ಉಡುಪು ಕಂಡುಬಂದಿದೆ. ತುಂಡರಿಸಿದ ತಲೆ ನಾಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ಮಹಿಳೆಯ ಮುಂಡ, ಕೈ ಮತ್ತು ಕಾಲುಗಳು ಪತ್ತೆಯಾಗಿವೆ. ರುಂಡವನ್ನು ಪತ್ತೆಹಚ್ಚಲು ನೀರನ್ನು ತೆರವು ಮಾಡಲು ಪಂಪ್ಗಳನ್ನು ಅಳವಡಿಸಲಾಗಿದೆ. ಆದರೆ, ರುಂಡ ಪತ್ತೆಯಾಗಿಲ್ಲ. ವಿಧಿವಿಜ್ಞಾನ ತಜ್ಞರು ಮತ್ತು ಶ್ವಾನದಳವನ್ನು ಕೂಡ ಕರೆಸಲಾಗಿತ್ತು. ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತುಂಡರಿಸಿದ ದೇಹವನ್ನು ಹೊರತೆಗೆದ ನಂತರ, ಸ್ಥಳದಿಂದ ಇತರ ಸಾಕ್ಷ್ಯಗಳನ್ನು ಸಹ ಸಂಗ್ರಹಿಸಲಾಗುತ್ತಿದೆ. ಕೊಲೆಯಾದ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮೊದಲು ಆಕೆಯ ಗುರುತನ್ನು ಕಂಡುಗಿಡಿಯಲಯಲು ಪ್ರಯತ್ನಿಸಲಾಗುತ್ತಿದೆ. ನಂತ್ರ,
ಆಕೆಯ ವಯಸ್ಸು ಮತ್ತು ಎಲ್ಲಿರುವಂತಹ ಇತರ ವಿವರಗಳು ಸ್ಪಷ್ಟವಾಗುತ್ತವೆ” ಎಂದು ಅಜಂಗಢ ಎಸ್ಪಿ ಅನುರಾಗ್ ಆರ್ಯ ತಿಳಿಸಿದ್ದಾರೆ.
ಶ್ರದ್ಧಾ ವಾಕರ್ ಎಂಬ 29 ವರ್ಷದ ಮಹಿಳೆಯನ್ನು ಮುಂಬೈನ ಆಕೆಯ ಲಿವ್-ಇನ್ ಪಾಲುದಾರ 28 ವರ್ಷದ ಅಫ್ತಾಬ್ ಪೂನಾವಾಲಾ ಕತ್ತು ಹಿಸುಕಿ, ಆಕೆಯ ದೇಹವನ್ನು ಸುಮಾರು 35 ತುಂಡುಗಳಾಗಿ ಕತ್ತರಿಸಿ ಸುಮಾರು 20 ದಿನಗಳ ಕಾಲ ಫ್ರಿಜ್ನಲ್ಲಿಟ್ಟು ಕ್ರಮೇಣ ದೆಹಲಿಯಾದ್ಯಂತ ಬಿಸಾಡಿದ್ದಾನೆ. ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
BIG NEWS: ದೇಶದಲ್ಲಿ ʻಏಕರೂಪ ನಾಗರಿಕ ಸಂಹಿತೆʼ ಜಾರಿಗೆ ತರಲು ಬಿಜೆಪಿ ಬದ್ಧ: ಕೇಂದ್ರ ಗೃಹ ಸಚಿವ ಅಮಿತ್ ಶಾ
WATCH VIDEO: ಅಮ್ಮನಿಗೆ ʻಚಿನ್ನದ ಸರʼ ಗಿಫ್ಟ್ ಕೊಟ್ಟ ಮಗ: ಹೃದಯಸ್ಪರ್ಶಿ ವಿಡಿಯೋ ವೈರಲ್
BIG NEWS: ದೇಶದಲ್ಲಿ ʻಏಕರೂಪ ನಾಗರಿಕ ಸಂಹಿತೆʼ ಜಾರಿಗೆ ತರಲು ಬಿಜೆಪಿ ಬದ್ಧ: ಕೇಂದ್ರ ಗೃಹ ಸಚಿವ ಅಮಿತ್ ಶಾ