ಬೆಂಗಳೂರು: ರಾಜ್ಯದ ರೈತರ ಅನುಕೂಲಕ್ಕಾಗಿ ಸರ್ಕಾರದಿಂದ ವಿವಿಧ ಯೋಜನೆಗಳಿದ್ದಾವೆ. ಅದರೊಟ್ಟಿಗೆ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳಿಂದ ರೈತರಿಗೆ ವಿವಿಧ ಸಾಲಸೌಲಭ್ಯಗಳು ಕೂಡ ದೊರೆಯುತ್ತಿವೆ.
ಈ ಬಗ್ಗೆ ಕಳೆದ ಮುಂಗಾರು ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಬುಡ್ನ ಸಿದ್ದಿ ಕೇಳಿದಂತ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಉತ್ತರ ನೀಡಿದ್ದಾರೆ. ಹಾಗಾದ್ರೇ ಸಹಕಾರಿ ಸಂಸ್ಥೆಗಳಿಂದ ರೈತರಿಗೆ ದೊರೆಯುವ ವಿವಿಧ ಸಾಲಗಳು ಯಾವುವು ಎನ್ನುವ ಮಾಹಿತಿ ಈ ಕೆಳಗಿದೆ.
ರೈತರಿಗೆ ಸಿಗಲಿವೆ ಸಹಕಾರಿ ಸಂಸ್ಥೆಗಳಿಂದ ಈ ಸಾಲ ಸೌಲಭ್ಯಗಳು
- ರೂ.5 ಲಕ್ಷಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು ರೂ.2 ಲಕ್ಷದವರೆಗೆ ಪಶುಸಂಗೋಪನೆ, ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಯೋಜನೆಯ ಜಾರಿಯಲ್ಲಿದೆ.
- ರೂ.15 ಲಕ್ಷದವರೆಗೆ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲವನ್ನು ಶೇ.3ರ ಬಡ್ಡಿದರದಲ್ಲಿ ವಿತರಣೆ.
- ಸಹಕಾರಿ ಸಂಘಗಳು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಶೇಖರಣೆ ಮಾಡಿ, ವಿತರಿಸುವ ಅಡಮಾನ ಸಾಲವನ್ನು ಶೇ.7ರ ಬಡ್ಡಿದರದಲ್ಲಿ ನೀಡಲಾಗುತ್ತದೆ.
- ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗೆ ನಾಲ್ಕು ಚಕ್ರದ ಪಿಕಪ್ ವ್ಯಾನ್ ಖರೀದಿಸಲು ಸಹಕಾರ ಸಂಘಗಳು 7 ಲಕ್ಷದವರೆಗೆ ಸಾಲವನ್ನು ಶೇ.4ರ ಬಡ್ಡಿದರಲ್ಲಿ ವಿತರಣೆ ಮಾಡಲಾಗುತ್ತದೆ.
- ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುವಾಗುವಂತೆ ಗೋದಾಮು ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷದವರೆಗಿನ ಸಾಲಕ್ಕೆ ಸರ್ಕಾರ ಶೇ.7ರಷ್ಟು ಬಡ್ಡಿ ಸಹಾಯಧನ ನೀಡಲಿದೆ.
- ಸಹಕಾರಿ ಸಂಘಗಳು ತಮ್ಮ ಬಂಡವಾಳ ಮತ್ತು ಮೇಲಿನ ಹಂತದ ಸಂಸ್ಥೆಗಳು ನೀಡುವ ಪುನರ್ಧನವನ್ನು ಉಪಯೋಗಿಸಿಕೊಂಡು ಸರ್ಕಾರ ನಿಗದಿಪಡಿಸಿದ ಬಡ್ಡಿದರದಲ್ಲಿ ರೈತರಿಗೆ ಸಾಲ ವಿತರಿಸಿ ಸಕಾಲದಲ್ಲಿ ವಸೂಲಾದಲ್ಲಿ ಸರ್ಕಾರದಿಂದ ನಿಯಮಿತ ಪ್ರಮಾಣದ ಬಡ್ಡಿ ಸಹಾಯಧನವನ್ನು ಒದಗಿಸಲಾಗುತ್ತಿದೆ.
ಈ ಸಾಲ ಸೌಲಭ್ಯಗಳಿಗೆ ಇರುವಂತ ನಿಬಂಧನೆಗಳು ಏನು? ಪಡೆಯುವುದು ಹೇಗೆ ಗೊತ್ತಾ?
5.00 ಲಕಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು 2.00 ಲಕ್ಷಗಳವರೆಗೆ ಪಶುಸಂಗೋಪನೆ/ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಯೋಜನೆ
1. ಈ ಯೋಜನೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್, ಪಿಕಾರ್ಡ್ ಬ್ಯಾಂಕುಗಳು ಹಾಗೂ ಡಿಸಿಸಿ ಬ್ಯಾಂಕುಗಳು ರೂ. 5.00 ಲಕ್ಷಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮತ್ತು ರೂ.2.00 ಲಕ್ಷಗಳವರೆಗೆ ಪಶುಸಂಗೋಪನೆ/ಮೀನುಗಾರಿಕೆ ಉದ್ದೇಶಗಳಿಗೆ ದುಡಿಯುವ ಬಂಡವಾಳದ ಸಾಲವನ್ನು `ಶೂನ್ಯ ಬಡ್ಡಿದರ ಅನ್ವಯವಾಗುವಂತೆ ರೈತರಿಗೆ ವಿತರಿಸಬೇಕಿರುತ್ತದೆ.
2. ರೈತನ ಭೂಮಿ ಅಥವಾ ವಾಸ ಸ್ಥಳ ಇರುವ ಪ್ರಾಥಮಿಕ ಸಹಕಾರ ಸಂಘದಲ್ಲಿ ರೈತನು ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು. ಸಂಘ ನಿಷ್ಕ್ರಿಯ ಆಗಿದ್ದಲ್ಲಿ ಸಂಬಂಧಿಸಿದ ಡಿಸಿಸಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕು.
3. ರೈತನು ಸಾಲ ಪಡೆಯಲು ನೀಡುವ ಭೂ ದಾಖಲೆಗಳಲ್ಲಿ ಇತರೇ ಯಾವುದೇ ಬ್ಯಾಂಕಿನಿಂದ ಸಾಲ ಪಡೆದಿರಬಾರದು.
4. ಅಲ್ಪಾವಧಿ ಕೃಷಿ ಸಾಲ ವಿತರಿಸಲು ರೈತನು ಹೊಂದಿರುವ ಭೂಹಿಡುವಳಿಗೆ ಮತ್ತು ಬೆಳೆಯುವ ಬೆಳೆಗೆ, ರಾಜ್ಯ ತಾಂತ್ರಿಕ ಸಲಹಾ ಸಮಿತಿ ಪ್ರತೀ ಬೆಳೆಗೆ ನಿಗದಿ ಪಡಿಸಿದ ಸ್ಟೇಲ್ ಆಫ್ ಫೈನಾನ್ಸ್ ಪ್ರಕಾರ ಬೆಳೆ ಸಾಲದ ಗರಿಷ್ಟ ಮಿತಿಯಾದ ಕ್ರಮಿಕ ಪತ್ತಿನ ಮಿತಿ (NCL) ಗೆ ಸಂಬಂದಿಸಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಂದ ಅನುಮೋದನೆ ಪಡೆದಿರತಕ್ಕದ್ದು ಹಾಗೂ ಬೆಳೆ ವಿಮೆ ಒಳಗೊಂಡಂತೆ ಸದರಿ ಮಿತಿ ಅಥವಾ ರೂ.5.00 ಲಕ್ಷ ಯಾವುದು ಕಡಿಮೆಯೋ ಆ ಮಿತಿಗೆ ಮಾತ್ರ ಸಾಲ ದೊರೆಯುತ್ತದೆ.
5. ಸಂಘಗಳು ಹೆಚ್ಚಿನ ಪ್ರಮಾಣದ ಸಾಲ ವಿತರಿಸಿದ್ದರೂ ಸಹ ಶೂನ್ಯ ಬಡ್ಡಿ ದರ ರೂ.5 ಲಕ್ಷಗಳ ವರೆಗಿನ ಸಾಲಕ್ಕೆ ಅನ್ವಯವಾಗುತ್ತದೆ.
6. ರೈತನು ಪಡೆದ ಸಾಲವನ್ನು ಸಂಘವು ನಿಗದಿಪಡಿಸಿದ ಗಡುವು ದಿನಾಂಕ ಅಥವಾ ಒಂದು ವರ್ಷ ಇದರಲ್ಲಿ ಯಾವುದು ಕಡಿಮೆಯೋ ಆ ಅವಧಿಯಲ್ಲಿ ಮರುಪಾವತಿಸಿದಲ್ಲಿ ಮಾತ್ರ ಬಡ್ಡಿ ಸಹಾಯಧನ ಲಭ್ಯವಾಗುತ್ತದೆ.
7. ಜಿಲ್ಲಾ ಸಹಕಾರ ಬ್ಯಾಂಕುಗಳು ನಬಾರ್ಡ್ ನಿಂದ ದೊರೆಯುವ ಮುನರ್ಧನ ಮತ್ತು ತಮ್ಮ ಬಂಡವಾಳದ ಲಭ್ಯತೆ ಆಧರಿಸಿ ರೈತರಿಗೆ ಸಾಲ ಮಂಜೂರು ಮಾಡಲಾಗುತ್ತದೆ.
15.00 ಲಕ್ಷಗಳವರೆಗೆ ಮದ್ಯಮಾವದಿ/ದೀರ್ಘಾವಧಿ ಕೃಷಿ ಸಾಲಗಳನ್ನು ಶೇಕಡ 3 ರ ಬಡ್ಡಿ ದರದಲ್ಲಿ ವಿತರಿಸುವ ಯೋಜನೆ.
1. ಈ ಯೋಜನೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಪಿಕಾರ್ಡ್ ಬ್ಯಾಂಕುಗಳು ಹಾಗೂ ಡಿಸಿಸಿ ಬ್ಯಾಂಕುಗಳು ರೂ. 15.00 ಲಕ್ಷಗಳವರೆಗಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ಶೇ.3 ರ ಬಡ್ಡಿದರ ಅನ್ವಯವಾಗುವಂತೆ ರೈತರಿಗೆ ವಿತರಿಸಿಬೇಕಿರುತ್ತದೆ.
2. ರೈತನ ಭೂಮಿ ಅಥವಾ ವಾಸ ಸ್ಥಳ ಇರುವ ಪ್ರಾಥಮಿಕ ಸಹಕಾರ ಸಂಘದಲ್ಲಿ ರೈತನು ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು. ಸಂಘ ನಿಷ್ಕ್ರಿಯ ಆಗಿದ್ದಲ್ಲಿ ಸಂಬಂಧಿಸಿದ ಡಿಸಿಸಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕು.
3. ರೈತನು ಸಾಲ ಪಡೆಯಲು ನೀಡುವ ಭೂ ದಾಖಲೆಗಳಲ್ಲಿ ಇತರೇ ಯಾವುದೇ ಬ್ಯಾಂಕಿನಿಂದ ಸಾಲ ಪಡೆದಿರಬಾರದು.
4. ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಲು ನಬಾರ್ಡ್ ನಿಗದಿಪಡಿಸಿದ ಯುನಿಟ್ ಕಾಸ್ಟ್ ಅನ್ವಯ ಮತ್ತು ಭದ್ರತೆಯ ಮೌಲ್ಯದನ್ವಯ ಸಾಲದ ಮಿತಿಯನ್ನು ನಿಗದಿಪಡಿಸಲಾಗುತ್ತದೆ ಮತ್ತು ಸಾಲಕ್ಕೆ ಡಿಸಿಸಿ ಬ್ಯಾಂಕುಗಳ ಸಾಲ ನಿಯಮಾವಳಿಗಳನ್ವಯ ಭದ್ರತೆ ಪಡೆಯಲಾಗುತ್ತದೆ.
5. ಸಂಘಗಳು ಹೆಚ್ಚಿನ ಪ್ರಮಾಣದ ಸಾಲ ವಿತಲಿಸಿದ್ದರೂ ಸಹ ಶೇ.3 ರ ಬಡ್ಡಿ ದರ ರೂ.15 ಲಕ್ಷಗಳ ವರೆಗಿನ ಸಾಲಕ್ಕೆ ಅನ್ವಯವಾಗುತ್ತದೆ.
6. ರೈತನು ಪಡೆದ ಸಾಲವನ್ನು ಸಂಘವು ಗರಿಷ್ಟ 10 ವರ್ಷಗಳ ಅವಧಿಗೆ ನಿಗದಿಪಡಿಸಿದ ಗಡುವು ದಿನಾಂಕದೊಳಗೆ ಸಾಲ ಮರುಪಾವತಿಸಿದಲ್ಲಿ ಮಾತ್ರ ಬಡ್ಡಿ ಸಹಾಯಧನ ಲಭ್ಯವಾಗುತ್ತದೆ.
7, ಜಿಲ್ಲಾ ಸಹಕಾರ ಬ್ಯಾಂಕುಗಳು ಹಾಗೂ ಪಿಕಾರ್ಡ್ ಬ್ಯಾಂಕ್ ನಬಾರ್ಡ್ ನಿಂದ ದೊರೆಯುವ ಮನರ್ಧನ ಮತ್ತು ತಮ್ಮ ಬಂಡವಾಳದ ಲಭ್ಯತೆ ಆಧರಿಸಿ ರೈತರಿಗೆ ಸಾಲ ಮಂಜೂರು ಮಾಡಲಾಗುತ್ತದೆ.
ಅಡಮಾನ ಸಾಲ
1. ರೈತನು ಸಂಘದ ಸದಸ್ಯನಾಗಿರತ್ತಕ್ಕದ್ದು.
2. ರೈತನ ಭೂಮಿ ಅಥವಾ ವಾಸ ಸ್ಥಳ ಸಂಘದ ವ್ಯಾಪ್ತಿಯಲ್ಲಿರತಕ್ಕದ್ದು,
3. ರೈತನು ತನ್ನ ಕೃಷಿ ಉತ್ಪನ್ನಗಳನ್ನು ಸಹಕಾರ ಸಂಘಗಳ ಗೋದಾಮಿನಲ್ಲಿ ಶೇಖಲಿಸಿಡತಕ್ಕದ್ದು.
4. ಶೇಖರಣೆ ಮಾಡಿದ ಕೃಷಿ ಉತ್ಪನ್ನದ ಶೇ.70 ರಷ್ಟು ಮೌಲ್ಯ ಅಥವಾ ರೂ.2.೦೦ ಲಕ್ಷ ಇದರಲ್ಲಿ ಯಾವುದು ಕಡಿಮೆಯೋ ಆ ಮೊತ್ತದ ಸಾಲವನ್ನು ಶೇ.7 ರ ಬಡ್ಡಿ ದರದಲ್ಲಿ ಗರಿಷ್ಟ 6 ತಿಂಗಳ ಅವಧಿಗೆ ಪಡೆಯಬಹುದಾಗಿದೆ.
5. ಸರ್ಕಾರದಿಂದ ಶೇ.4.00 ರ ಬಡ್ಡಿ ಸಹಾಯಧನವನ್ನು ರೈತರ ಪರವಾಗಿ ಸಹಕಾರ ಸಂಘಗಳಿಗೆ ನೀಡಲಾಗುವುದು.
ನಾಲ್ಕು ಚಕ್ರದ ಪಿಕ್‌ಅಪ್ ವ್ಯಾನ್ (Pick-up Van) ಖಲೀದಿಸಲು ಏಳು ಲಕ್ಷ ರೂ.ವರೆಗಿನ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ವಿತರಿಸುವ ಯೋಜನೆ
1. ಈ ಯೋಜನೆಯು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇರುವ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಅಂದರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಬೇಜಯನ್ ಸಹಕಾರ ಸಂಸ್ಥೆಗಳು. ಪಿಕಾರ್ಡ್ ಬ್ಯಾಂಕುಗಳು ರೈತರಿಗೆ ನೇರವಾಗಿ ಪಿಕ್ ಅಪ್ ವ್ಯಾನ್ ಖರೀದಿಸಲು ನೀಡುವ ಸಾಲಗಳಿಗೆ ಅನ್ವಯಿಸುತ್ತದೆ.
2. ಈ ಯೋಜನೆಯಲ್ಲಿ ಸಾಲ ಪಡೆಯಲು ರೈತರ ಸಾಗುವ ಭೂಮಿಯು ಗುಡ್ಡಗಾಡು ಪ್ರದೇಶದಲ್ಲಿರಬೇಕು, ಅಂದರೆ ರೈತರ ಹೊಲವು ಶೇ.15 ಕ್ಕಿಂತ ಹೆಚ್ಚಿನ ಸ್ಫೋಸ್ ಹೊಂದಿರಬೇಕು ಅಥವಾ ರೈತನ ಮನೆ, ತಾಲ್ಲೂಕು ಮಾರುಕಟ್ಟೆ ಮತ್ತು ಹೊಲದ ನಡುವಿನ ರಸ್ತೆಯು ಗುಡ್ಡದ ಪ್ರದೇಶಗಳನ್ನು ಹೊಂದಿರತಕ್ಕದ್ದು ಮತ್ತು ರೈತನ ಹೊಲದಲ್ಲಿ ಟ್ರಾಕ್ಟರ್ ನ್ನು ಬಳಸಿ ಉಳುಮೆ ಮಾಡದೇ ಇರಬೇಕು. ಗುಡ್ಡಗಾಡು ಪ್ರದೇಶಗಳ ಗ್ರಾಮಗಳನ್ನು ಡಿಸಿಸಿ ಬ್ಯಾಂಕುಗಳು ಜಿಲ್ಲಾಧಿಕಾರಿಯವರಿಂದ ಅನುಮೋದನೆ ಪಡೆದು ಸಂಬಂಧಿಸಿದ ಎಲ್ಲಾ ಸಹಕಾರ ಸಂಘಗಳಿಗೆ ಹಾಗೂ ಇಲಾಖಾ ಅಧಿಕಾರಿಗಳಿಗೆ ತಿಳಿಸತಕ್ಕದ್ದು. ಹಾಗೂ ಈ ಪ್ರದೇಶದಲ್ಲಿನ ಭೂಮಿ ಹೊಂದಿರುವ ರೈತರಿಗೆ ಮಾತ್ರ ಯೋಜನೆಯಲ್ಲಿ ಸಾಲ ವಿತರಿಸತಕ್ಕದ್ದು.,
3. ಈ ಯೋಜನೆಯಲ್ಲಿನ ಜಿಲ್ಲೆಗಳಲ್ಲಿ ಭೂಮಿ ಹೊಂದಿರುವ ರೈತರಿಗೆ ಗಲಿಷ್ಠ 1.75 ಟನ್ ಸಾಗಾಣಿಕೆ ಸಾಮರ್ಥ್ಯದ, ಗಲಷ್ಟ 3 ಸೀಟರ್ ಹೊಂದಿರುವ ನಾಲ್ಕು ಚಕ್ರದ ಪಿಕ್ ವ್ಯಾನ್ ಖಲೀದಿಸಲು ಈ ಜಿಲ್ಲೆಗಳ ಸಹಕಾರ ಸಂಘಗಳು ಗರಿಷ್ಟ ರೂ.7.00 ಲಕ್ಷಗಳ ವರೆಗೆ ನೀಡುವ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳು ಗರಿಷ್ಟ ಶೇ.11 ರ ಬಡ್ಡಿ ದರ ಮತ್ತು ಡಿಸಿಸಿ ಬ್ಯಾಂಕುಗಳು ಗರಿಷ್ಟ 10 ರ ಬಡ್ಡಿ ದರದಲ್ಲಿ ಸಾಲ ವಿತರಿಸಬೇಕು.
5. ಪ್ರತೀ ಜಿಲ್ಲೆಯಲ್ಲಿ 100 ಫಲಾನುಭವಿಗಳಗೆ ಈ ಸೌಲಭ್ಯ ದೊರೆಯಲಿದೆ. 6. ರೈತರು ಪ್ರತೀ ಆರು ತಿಂಗಳಿಗೊಮ್ಮೆ ಗರಿಷ್ಟ 7 ವರ್ಷಗಳ ಅವಧಿಗೆ ಸಹಕಾರ ಸಂಘಗಳು ನಿಗಣಪಡಿಸಿದ ಗಡುವಿನ ದಿನಾಂಕದೊಳಗೆ ಸಾಲದ ಕಂತನ್ನು ಮರುಪಾವತಿಸಿದಲ್ಲಿ ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳಿಗೆ ಶೇ.7 ಮತ್ತು ಡಿಸಿಸಿ ಬ್ಯಾಂಕುಗಳಿಗೆ ರೈತರ ಪರವಾಗಿ ಶೇ.6 ರ ಬಡ್ಡಿ ಸಹಾಯಧನ ದೊರೆಯುತ್ತದೆ. ಇದರಿಂದ ರೈತರಿಗೆ ಶೇ.4 ರ ಬಡ್ಡಿ ದರದಲ್ಲಿ ಸಾಲ ದೊರೆತಂತಾಗುತ್ತದೆ.
ರೈತರು ಗೊದಾಮು ನಿರ್ಮಿಸಲು ರೂ.20 ಲಕ್ಷಗಳ ವರೆಗೆ ಪಡೆದ ಸಾಲಗಳಿಗೆ ಶೇ.7 ರ ಬಡ್ಡಿ ಸಹಾಯಧನ ನೀಡುವುದು.
1.ಈ ಯೋಜನೆಯು ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಅಂದರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಪಿಕಾರ್ಡ್ ಬ್ಯಾಂಕುಗಳು ರೈತರಿಗೆ ನೇರವಾಗಿ ಕೃಷಿ ಉತ್ಯನ್ನಗಳನ್ನು ಸಂಗ್ರಹಿಸುವ ಸಲುವಾಗಿ ಗೋದಾಮುಗಳನ್ನು ನಿರ್ಮಿಸಲು ನೀಡುವ ಸಾಲಗಳಿಗೆ ಅನ್ವಯಿಸುತ್ತದೆ.
2. ಈ ಯೋಜನೆಯಲ್ಲಿ ಪಡೆಯುವ ಸಾಲದಲ್ಲಿ ರೈತರು ಗ್ರಾಮೀಣ ಪ್ರದೇಶಗಳಲ್ಲಿರುವ ತಮ್ಮ ಗ್ರಾಮ ಪಂಚಾಯತಿ/ಪಟ್ಟಣ ಪಂಚಾಯತಿ ವ್ಯಾಪ್ತಿಯ ನಿವೇಶನಗಳಲ್ಲಿ ಅಥವಾ ಕೃಷಿ ಜಮೀನುಗಳಲ್ಲಿ Warehousing Development and Regulatory Authority / ನಬಾರ್ಡ್ ನಿಗದಿಪಡಿಸಿದ ವಿನ್ಯಾಸದನ್ವಯ ಗೋದಾಮು ನಿರ್ಮಿಸತಕ್ಕದ್ದು.
3. ಈ ಯೋಜನೆಯಲ್ಲಿ ಸಹಕಾರ ಸಂಘಗಳು ಗರಿಷ್ಟ ರೂ.20.00 ಲಕ್ಷಗಳ ವರೆಗ ನೀಡಿದ ಸಾಲಗಳಿಗೆ ಬಡ್ಡಿ ಸಹಾಯಧನ ದೊರೆಯುತ್ತದೆ. ಸಹಕಾರ ಸಂಘಗಳು ರೂ.20.00 ಲಕ್ಷಕ್ಕಿಂತ ಹೆಚ್ಚಿನ ಸಾಲ ವಿತರಿಸಿದರೂ ಸಹ ಮೊದಲ ರೂ.20.00 ಲಕ್ಷಗಳ ವರೆಗಿನ ಸಾಲದ ಹೊರಬಾಕಿಗೆ ಬಡ್ಡಿ ಸಹಾಯಧನ ದೊರೆಯುತ್ತದೆ.
4. ಸಹಕಾರ ಸಂಘಗಳು ಗರಿಷ್ಟ ಶೇ.20 ರಷ್ಟು ವಂತಿಕೆಯನ್ನು ಮಾತ್ರ ಪಡೆದು ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ವಿತರಿಸತಕ್ಕದ್ದು. ಸಾಲದ ಮೊತ್ತಕ್ಕೆ ಗೋದಾಮು ಮತ್ತು ಭೂಮಿಯ ಮೌಲ್ಯ ಒಳಗೊಂಡಂತೆ 1.50 ರಷ್ಟು ಮಾತ್ರ ಭದ್ರತೆ ಪಡೆಯತಕ್ಕದ್ದು.
5. ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳು ಗರಿಷ್ಟ ಶೇ.11 ರ ಬಡ್ಡಿ ದರ ಮತ್ತು ಡಿಸಿಸಿ ಬ್ಯಾಂಕುಗಳು ಗರಿಷ್ಟ 10 ರ ಬಡ್ಡಿ ದರದಲ್ಲಿ ಸಾಲ ವಿತಲಿಸಿಬೇಕು.
6. ರೈತರು ಪ್ರತಿ ಆರು ತಿಂಗಳಿಗೊಮ್ಮೆ ಗರಿಷ್ಟ 7 ವರ್ಷಗಳ ಅವಧಿಗೆ ಸಹಕಾರ ಸಂಘಗಳು ನಿಗದಿಪಡಿಸಿದ ಗಡುವಿನ ದಿನಾಂಕದೊಳಗೆ ಸಾಲದ ಕಂತನ್ನು ಮರುಪಾವತಿಸಿದಲ್ಲಿ ಪ್ಯಾಕ್ಸ್ ಮತ್ತು ಪಿಕಾರ್ಡ್ ಬ್ಯಾಂಕುಗಳಿಗೆ ಶೇ.7 ಮತ್ತು ಡಿಸಿಸಿ ಬ್ಯಾಂಕುಗಳಿಗೆ ರೈತರ ಪರವಾಗಿ ಶೇ.6 ರ ಬಡ್ಡಿ ಸಹಾಯಧನ ದೊರೆಯುತ್ತದೆ. ಇದರಿಂದ ರೈತರಿಗೆ ಶೇ.4 ರ ಬಡ್ಡಿ ದರದಲ್ಲಿ ಸಾಲ ದೊರೆತಂತಾಗುತ್ತದೆ ಎಂಬುದಾಗಿ ಸಹಕಾರ ಸಂಘಗಳ ಅಪರ ನಿಬಂಧಕರು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 75,000 ದಂಡ