ನವದೆಹಲಿ: ಮೆಟಾ ಒಡೆತನದ ವಾಟ್ಸಾಪ್(WhatsApp) ಬಳಕೆದಾರರಿಗೆ ಹೊಸ ವೈಶಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ಸದ್ಯ ಇದೀಗ ವಾಟ್ಸಾಪ್ನಲ್ಲಿ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚು ಮೊಬೈಲ್ ಅಥವಾ ಡಿವೈಸ್ಗಳಲ್ಲಿ ನಿಮ್ಮ ವಾಟ್ಸಾಪ್ ಅಕೌಂಟ್ ಬಳಸಲು ಸಾಧ್ಯವಾಗುವ ಹೊಸ ಫೀಚರ್ಅನ್ನು ಪರಿಚಯಿಸುತ್ತಿದೆ.
ಈ ಬಗ್ಗೆ ವಾಟ್ಸಾಪ್ ಬೀಟಾ ಟ್ರ್ಯಾಕರ್ ಸಂಸ್ಥೆ ‘ವಾಟ್ಸಾಪ್ ಬೀಟಾ ಇನ್ಫೋ’ ಮಾಹಿತಿ ನೀಡಿದೆ. ಇಲ್ಲಿ, ವಾಟ್ಸಾಪ್ ಬಳಕೆದಾರರು ಎರಡಕ್ಕೂ ಹೆಚ್ಚು ಸ್ಮಾರ್ಟ್ಫೋನ್ಗಳಲ್ಲಿ ಅಥವಾ ಡಿವೈಸ್ಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಬಳಸಲು ಸಾಧ್ಯವಾಗುವಂತಹ ಹೊಸ ‘ಕಂಪ್ಯಾನಿಯನ್ ಮೋಡ್’ ಎಂಬ ವೈಶಿಷ್ಟ್ಯದ ಬಗ್ಗೆ ತಿಳಿಸಿದ್ದಾರೆ.
ಈ ವೈಶಿಷ್ಟ್ಯವು, ಏಕಕಾಲದಲ್ಲಿ ಎರಡು ಸ್ಮಾರ್ಟ್ಫೋನ್ಗಳಲ್ಲಿ ಒಂದೇ ವಾಟ್ಸಾಪ್ ಅಕೌಂಟ್ ಬಳಸಲು ಬಯಸುವ ವಾಟ್ಸಾಪ್ ಬಳಕೆದಾರರಿಗೆ ಅನುಕೂಲವಾಗಿರಲಿದೆ.
ಇದೀಗ ವಾಟ್ಸಾಪ್ನಲ್ಲಿ ತರಲಾಗಿರುವ ಹೊಸ ಕಂಪ್ಯಾನಿಯನ್ ಮೋಡ್ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಡಿವೈಸ್ಗಳಲ್ಲಿ v2.22.23.18 ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ಎರಡನೇ ಮೊಬೈಲ್ಗೆ ಲಿಂಕ್ ಮಾಡಿದರೆ, ನಿಮ್ಮ ದ್ವಿತೀಯ ಸಾಧನದಲ್ಲಿ ನಿಮ್ಮ ಎಲ್ಲಾ ಚಾಟ್ಗಳು ಮತ್ತು ಡೇಟಾವನ್ನು ಸಿಂಕ್ ಮಾಡಲಾಗುತ್ತದೆ ಎಂದು ಬೀಟಾ ಇನ್ಫೋ ವರದಿ ತಿಳಿಸಿದೆ.
BIGG BREAKING NEWS : `ಜೆಡಿಎಸ್’ ಪಕ್ಷದ ಮತ್ತೊಂದು ವಿಕೆಟ್ ಪತನ : ಪಕ್ಷಕ್ಕೆ ಮಾಜಿ ಶಾಸಕ ಹೆಚ್.ನಿಂಗಪ್ಪ ರಾಜೀನಾಮೆ
BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?
BIGG BREAKING NEWS : `ಜೆಡಿಎಸ್’ ಪಕ್ಷದ ಮತ್ತೊಂದು ವಿಕೆಟ್ ಪತನ : ಪಕ್ಷಕ್ಕೆ ಮಾಜಿ ಶಾಸಕ ಹೆಚ್.ನಿಂಗಪ್ಪ ರಾಜೀನಾಮೆ