ನವದೆಹಲಿ : ಏರ್ ಇಂಡಿಯಾ (Air India )ವಿಮಾದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಶುಕ್ರವಾರ ಎಲ್ಲಾ ನಿಗದಿತ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಮುಖ್ಯಸ್ಥರಿಗೆ ನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆಯನ್ನು ನೀಡಿದೆ.
ಕೆಳದ ಕೆಲ ದಿನಗಳಲ್ಲಿ ಏರ್ ಇಂಡಿಯಾ (Air India) ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಪ್ರಯಾಣಿಕರಿಬ್ಬರು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಂಬಂಧ ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಕೆಲವು ಸೂಚನೆ ನೀಡಿದೆ.
ಈ ಕುರಿತಂತೆ ಡಿಜಿಸಿಎ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಎಲ್ಲಾ ಸಮಾಧಾನಕರ ವಿಧಾನಗಳು ಖಾಲಿಯಾದ ಸಮಯದಲ್ಲಿ ಅಶಿಸ್ತಿನ ಪ್ರಯಾಣಿಕರನ್ನು ನಿಯಂತ್ರಿಸಲು ಅಗತ್ಯವಿದ್ದರೆ ಸಾಧನಗಳನ್ನು ಬಳಸುವಂತೆ ಸಲಹೆ ನೀಡಿದೆ.
DGCA issues an advisory to Head of Operations of all Scheduled Airlines with regard to handling unruly passengers on board and respective responsibilities as per the regulations. pic.twitter.com/b84yD3ya4u
— ANI (@ANI) January 6, 2023
ವಿಮಾನಗಳಲ್ಲಿ ಪ್ರಯಾಣಿಕರಿಂದ ಅನುಚಿತ ವರ್ತನೆಯ ಕೆಲವು ಘಟನೆಗಳನ್ನು ಡಿಜಿಸಿಎ ಗಮನಿಸಿತ್ತು. ಪೋಸ್ಟ್ ಹೋಲ್ಡರ್ಗಳು, ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎಂಬುದನ್ನು ಅರಿತ ಸಂಸ್ಥೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಇಂತಹ ಘಟನೆಗಳ ಬಗ್ಗೆ ವಿಮಾನಯಾನ ಸಂಸ್ಥೆಗಳು ಕ್ರಮ ಕೈಗೊಳ್ಳದಿರುವುದು, ಅನುಚಿತ ಕ್ರಮ ಅಥವಾ ಲೋಪವು ಸಮಾಜದ ವಿವಿಧ ವಿಭಾಗಗಳಲ್ಲಿ ವಿಮಾನ ಪ್ರಯಾಣದ ಇಮೇಜ್ ಅನ್ನು ಕಳಂಕಗೊಳಿಸಿದೆ ಎಂದೇಳಿದೆ.
ಕೆಲ ದಿನಗಳ ಹಿಂದೆ ಪ್ಯಾರಿಸ್-ದೆಹಲಿ ಏರ್ ವಿಮಾನದಲ್ಲಿ ಪಾನಮಕ್ತ ಪ್ರಯಾಣಿಕನೋರ್ವ ಸಹ ಮಹಿಳಾ ಪ್ರಯಾಣಿಕರ ಹೊದಿಕೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ವರದಿಯಾಗಿತ್ತು.
BREAKING NEWS: ಕಾಂಗ್ರೆಸ್ ಪಕ್ಷದಿಂದ ಯೂಸುಫ್ ಶರೀಫ್ ಆಲಿಯಾಸ್ ಕೆಜಿಎಫ್ ಬಾಬು ಅಮಾನತು | KGF Babu Suspended