ಬೆಂಗಳೂರು : ಬೆಂಗಳೂರಲ್ಲಿ ಕುಡಿಯುವ ನೀರನ್ನು ಕೇವಲ ಕುಡಿಯಲು ಅಷ್ಟೇ ಬಳಕೆ ಮಾಡುವಂತೆ ಜಲಮಂಡಳಿ ಸೂಚನೆ ನೀಡಿದ್ದು, ನೀರನ್ನು ಅನ್ಯ ಬಳಕೆ ಮಾಡಿದರೆ ಮಾ.10ರಂದು ದಂಡ ಹಾಕುವುದಾಗಿ ಆದೇಶ ನೀಡಿತ್ತು. ಆ ಆದೇಶದ ಪ್ರಕಾರ ಇದುವರೆಗೂ ಬೆಂಗಳೂರು ನಗರದಲ್ಲಿ ಈ ಸಂಬಂಧ ಈವರೆಗೂ 407 ಮಂದಿಗೆ ದಂಡ ವಿಧಿಸಿದ್ದು, 20 ಲಕ್ಷ ರೂ ಸಂಗ್ರಹವಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರಿನ ಜನತೆಗೆ ಜಲ ಮಂಡಳಿಯು ಕುಡಿಯುವ ನೀರಿಗೆ ಹೊರತುಪಡಿಸಿ ವಾಹನಗಳ ಸ್ವಚ್ಛತೆಗೆ ಕೈದೊಟಕ್ಕೆ ಕಟ್ಟಡಗಳ ನಿರ್ಮಾಣಕ್ಕೆ ಅಥವಾ ಕಾರಂಜಿಗಳಲ್ಲಿ ಮಾಲ್ಗಳಲ್ಲಿ ಇತರ ಅನ್ಯ ಬಳಕೆಗೆ ಕುಡಿಯುವ ನೀರನ್ನು ಬಳಸಿದರೆ ಮಾ. 10ರಂದು ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದವರಿಗೆ 5 ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ಸಹ ನೀಡಲಾಗಿತ್ತು.
ಲೋಕಸಭಾ ಚುನಾವಣೆ 2024: ಕಾಶ್ಮೀರಿ ವಲಸಿಗ ಮತದಾರರಿಗೆ ಮತದಾನ ಪ್ರಕ್ರಿಯೆ ಮಾರ್ಪಡಿಸಿದ ಚುನಾವಣಾ ಆಯೋಗ
ಆದರೂ ಕೂಡ ಜಲಮಂಡಳಿಯ ಆದೇಶವನ್ನು ಮೀರಿ ಈ ಹಲವು ಜನರು ಕಾವೇರಿ ನೀರನ್ನು ಕುಡಿಯಲು ಬಳಸದೆ ಅನ್ಯ ಬಳಕೆ ಮಾಡಿದ್ದರಿಂದ 5000 ದಂಡ ವಿಧಿಸಿದ್ದಾರೆ. ಅದರ ಜೊತೆಗೆ ಮತ್ತೆ ಪುನರಾವರ್ತನೆ ಆದರೆ ದಂಡದ ಜೊತೆಗೆ ಪ್ರತಿದಿನ 500 ರೂಪಾಯಿ ದಂಡ ಹಾಕಲಾಗಿದೆ. ಹೀಗಾಗಿ ಈವರೆಗೂ ಒಟ್ಟು 90% ಜನತೆಗೆ ಕುಡಿಯುವ ನೀರನ್ನು ಅನ್ಯ ಬಳಕೆ ಮಾಡಿದ್ದರಿಂದ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.