ವಾಷಿಂಗ್ಟನ್: ವಿಶ್ವದ ಪ್ರಮುಖ ಆರ್ಥಿಕ ಸವಾಲುಗಳನ್ನು ಎದುರಿಸಲು ಉಭಯ ರಾಷ್ಟ್ರಗಳ ನಡುವೆ ಬಲವಾದ ಬಾಂಧವ್ಯವನ್ನು ಹೊಂದಲು ಅವರು ಅಮೆರಿಕ-ಭಾರತ ಆರ್ಥಿಕ ಮತ್ತು ಹಣಕಾಸು ಪಾಲುದಾರಿಕೆ ಸಭೆಯ ಒಂಬತ್ತನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಮುಂದಿನ ತಿಂಗಳು ಭಾರತಕ್ಕೆ ಪ್ರಯಾಣಿಸುವುದಾಗಿ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್(Janet Yellen) ತಿಳಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಯೆಲೆನ್ ಅವರು ಈ ಮಾಹಿತಿ ನೀಡಿದ್ದಾರೆ.
“ನವೆಂಬರ್ನಲ್ಲಿ G20 ಸಭೆಗಳಿಗೆ ಮುಂಚಿತವಾಗಿ, ನಮ್ಮ ಒಂಬತ್ತನೇ ಪಾಲುದಾರಿಕೆ ಸಭೆಯಾದ ಯುಎಸ್-ಭಾರತ ಆರ್ಥಿಕ ಮತ್ತು ಹಣಕಾಸು ಪಾಲುದಾರಿಕೆಯಲ್ಲಿ ಪಾಲ್ಗೊಳ್ಳಲು ನಾನು ಖಜಾನೆ ಕಾರ್ಯದರ್ಶಿಯಾಗಿ ಭಾರತಕ್ಕೆ ನನ್ನ ಮೊದಲ ಪ್ರವಾಸವನ್ನು ಕೈಗೊಳ್ಳುತ್ತೇನೆ ಎಂದು ಇಂದು ಘೋಷಿಸಲು ನನಗೆ ಸಂತೋಷವಾಗಿದೆ” ಎಂದು ಯೆಲೆನ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. .
ಸಚಿವೆ ಸೀತಾರಾಮನ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲು ವಾಷಿಂಗ್ಟನ್ ಡಿಸಿಗೆ ಐದು ದಿನಗಳ ಅಧಿಕೃತ ಭೇಟಿಯಲ್ಲಿದ್ದಾರೆ. ಈ ವೇಳೆ ಅವರು ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
BIGG NEWS: ರಾಜ್ಯದಲ್ಲಿ ಸುರಿದ ಧಾರಕಾರ ಮಳೆ; ಉಕ್ಕಿ ಹರಿಯುತ್ತಿರುವ ಹಳ್ಳಗಳು