ಲಾಸ್ ಏಂಜಲೀಸ್: ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕಾರಣ ವ್ಯಕ್ತಿಯೊಬ್ಬ ತನ್ನ ಐದು ಮಕ್ಕಳೂ ಸೇರಿದಂತೆ ಕುಟುಂಬದ ಏಳು ಜನರನ್ನು ಗುಂಡಿಕ್ಕಿ ಕೊಂದು ತಾನೂ ಸಾವಿಗೆ ಶರಣಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಬುಧವಾರ ಮನೆಯಲ್ಲಿ ಒಂದೇ ಕುಟುಂಬದ ಮೂವರು ವಯಸ್ಕರು ಮತ್ತು ಐದು ಮಕ್ಕಳ ಶವಗಳನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇವರೆಲ್ಲರೂ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯಲ್ಲಿ ಏಳು ಮಂದಿಯನ್ನು ಕೊಂದ ನಂತರ ಆರೋಪಿ 42 ವರ್ಷದ ಮೈಕೆಲ್ ಹೈಟ್ ತಾನೂ ಕೂಡ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಮೃತರನ್ನು ಮೈಕೆಲ್ ಹೈಟ್ ಅವರ ಪತ್ನಿ, ಆಕೆಯ ತಾಯಿ ಮತ್ತು ದಂಪತಿಯ ಐದು ಮಕ್ಕಳು ಎನ್ನಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಡಿಸೆಂಬರ್ 21 ರಂದು ಮೈಕೆಲ್ ಹೈಟ್ ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿಸಲ್ಲಿಸಿದ್ದಾರೆ. ಇದೇ ಈ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
BIG NEWS: ‘ಜಮ್ಮು & ಕಾಶ್ಮೀರ ಭಾರತದಿಂದ ಬೇರ್ಪಡಿಸಲಾಗದ ಭಾಗ’: ಪಾಕ್ಗೆ ಎಂಇಎ ತಿರುಗೇಟು
BREAKING NEWS: ಗುತ್ತಿಗೆದಾರ ಸಂತೋಪ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಈಶ್ವರಪ್ಪಗೆ ಮತ್ತೆ ಸಂಕಷ್ಟ
BIG NEWS: ‘ಜಮ್ಮು & ಕಾಶ್ಮೀರ ಭಾರತದಿಂದ ಬೇರ್ಪಡಿಸಲಾಗದ ಭಾಗ’: ಪಾಕ್ಗೆ ಎಂಇಎ ತಿರುಗೇಟು
BREAKING NEWS: ಗುತ್ತಿಗೆದಾರ ಸಂತೋಪ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಈಶ್ವರಪ್ಪಗೆ ಮತ್ತೆ ಸಂಕಷ್ಟ