ಇಂಡಿಯಾನಾಪೊಲಿಸ್ (ಯುಎಸ್): ಅಮೇರಿಕಾದಲ್ಲಿ ಮತ್ತೊಂದು ಗುಂಡಿನ ದಾಳಿ ವರದಿಯಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಯುಎಸ್ ನ ಇಂಡಿಯಾನಾ ಮಾಲ್ನಲ್ಲಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಬಂದೂಕುಧಾರಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ (ಸ್ಥಳೀಯ ಕಾಲಮಾನ) ನಡೆದಿದೆ.
ಫುಡ್ ಕೋರ್ಟ್ನಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ. ಇದರಿಂದ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಗ್ರೀನ್ವುಡ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಜಿಮ್ ಐಸನ್ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇನ್ನೂ ಆರೋಪಿಗಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ. ಆತ ನಡೆಸಿದ ಈ ಕೃತ್ಯಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಹೆಚ್ಚುತ್ತಿರುವ ಬಂದೂಕು ಹಿಂಸಾಚಾರದ ಘಟನೆಗಳಿಂದ ಮಕ್ಕಳು ಮತ್ತು ಕುಟುಂಬಗಳನ್ನು ರಕ್ಷಿಸುವ ಸಲುವಾಗಿ ಯುಎಸ್ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಅಗತ್ಯವಿದೆ ಅಥವಾ ಅವುಗಳನ್ನು 18 ರಿಂದ 21 ಕ್ಕೆ ಖರೀದಿಸುವ ವಯಸ್ಸನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅಧ್ಯಕ್ಷ ಜೋ ಬೈಡನ್ ಈ ಹಿಂದೆ ಹೇಳಿದ್ದರು.
Big news: ಇಂದು ಬೆಳಗ್ಗೆ 10 ಗಂಟೆಯಿಂದ ರಾಷ್ಟ್ರಪತಿ ಚುನಾವಣೆ; ಭಾರೀ ಗೆಲುವಿನ ನಿರೀಕ್ಷೆಯಲ್ಲಿ ದ್ರೌಪದಿ ಮುರ್ಮು
Big news: ಇಂದಿನಿಂದ ಹೊಸ ‘GST ದರ’ ಜಾರಿ; ಯಾವುದು ಅಗ್ಗ? ಯಾವುದು ದುಬಾರಿ?… ಇಲ್ಲಿದೆ ಸಂಪೂರ್ಣ ಮಾಹಿತಿ!