ಲಾಸ್ ಏಂಜಲೀಸ್ (ಯುಎಸ್): ಅಮೆರಿಕದ ನೆವಾಡಾ ರಾಜ್ಯದ ನಾರ್ತ್ ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನದ ಸುಮಾರಿಗೆ ಪ್ರಯಾಣಿಕರಿದ್ದ ಸಣ್ಣ ವಿಮಾನಗಳ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಸ್ ವೇಗಾಸ್ನಲ್ಲಿ ಪೈಪರ್ PA-46 ಮತ್ತು ಸೆಸ್ನಾ 172N ನಡುವೆ ಉಂಟಾದ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು US ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಟ್ವೀಟ್ನಲ್ಲಿ ತಿಳಿಸಿದೆ.
Incident Alert- at aprox 12pm today NLVFD and LVFR crews responded to a report of a mid air collision at the North Las Vegas airport. At this time there are 4 reported fatalities. Accident is still under investigation. pic.twitter.com/HhyeCDLrnE
— CNLV Fire Department (@NLVFireDept) July 17, 2022
ಇವೆರಡೂ ಏಕ-ಎಂಜಿನ್ ಸ್ಥಿರ-ವಿಂಗ್ ಸಣ್ಣ ವಿಮಾನಗಳಾಗಿವೆ. ಪ್ರತಿ ವಿಮಾನದಲ್ಲಿ ಇಬ್ಬರು ವ್ಯಕ್ತಿಗಳಿದ್ದರು ಎಂದು ವರದಿ ತಿಳಿಸಿದೆ.
ಈ ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವ್ರು ರಕ್ತದಾನ ಮಾಡ್ಬೇಕು: ಅದೆಲ್ಲಿ ಅಂತೀರಾ? ಇಲ್ಲಿ ನೋಡಿ…