ವಾಷಿಂಗ್ಟನ್: ಯುಎಸ್ ಪ್ರಥಮ ಮಹಿಳೆ, ಜೋ ಬೈಡನ್ ಪತ್ನಿ ಜಿಲ್ ಬೈಡನ್(Jill Biden)ಗೆ ಮತ್ತೆ ಕೊರೊನಾ ಸೋಂಕು ತಗುಲಿದ್ದು, ಮಂಗಳವಾರ ನಡೆಸಿದ್ದ ಕೋವಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿದೆ ಎಂದು ಅವರ ಉಪ ಸಂವಹನ ನಿರ್ದೇಶಕ ಕೆಲ್ಸಿ ಡೊನೊಹ್ಯು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಜಿಲ್ ಬೈಡನ್ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದರು. ಇದೀಗ ಅವರ ವರದಿಯಲ್ಲಿ ಪಾಸಿಟಿವ್ ಬಂದಿದೆ. ಅವರು ಹೆಚ್ಚಿನ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಅವರು ನೆಗೆಟಿವ್ ವರದಿ ಪಡೆಯುವವರೆಗೆ ಡೆಲವೇರ್ನಲ್ಲಿರುವ ಫ್ಯಾಮಿಲಿ ಬೀಚ್ ಹೌಸ್ನಲ್ಲಿ ಪ್ರತ್ಯೇಕವಾಗಿರುತ್ತಾರೆ ಎಂದು ಡೊನೊಹ್ಯು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕೆರೊಲಿನಾದ ಕಿವಾಹ್ ದ್ವೀಪದಲ್ಲಿ ವಿಹಾರಕ್ಕೆ ಹೋಗುತ್ತಿದ್ದಾಗ ಆಗಸ್ಟ್ 15 ರಂದು ಜಿಲ್ ಬೈಡನ್ ಮೊದಲ ಬಾರಿಗೆ ಕೋವಿಡ್ಗೆ ಒಳಗಾಗಿದ್ದರು.
ತಾಯಿ ಮನೆ ಬಿಟ್ಟು ಬಾರದ ಪತ್ನಿ: ಹೆಂಡ್ತಿಯನ್ನು ಮರಳಿ ಕರೆಸುವಂತೆ ಮೊಬೈಲ್ ಟವರ್ ಏರಿ ಕುಂತ ಪತಿ!.. Video
BIGG NEWS : ಬಿಸಿಯೂಟ ನೌಕರರಿಗೆ `ನರೇಗ ಜಾಬ್ ಕಾರ್ಡ್’ : ರಾಜ್ಯ ಸರ್ಕಾರ ಆದೇಶ