ಕಾನ್ಪುರ: ನಿರಂತರವಾಗಿ ಬೊಗಳುತ್ತಿದ್ದ ಬೀದಿ ನಾಯಿಯನ್ನು ಕೋಪಗೊಂಡ ವ್ಯಕ್ತಿಯೊಬ್ಬ ಇಟ್ಟಿಗೆಯಿಂದ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಘಟನೆ ದೃಶ್ಯಾವಳಿ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಜಾಕಿ ಎಂಬ ವ್ಯಕ್ತಿ ನಾಯಿಯ ಬಳಿಗೆ ನಡೆದು ಬಂದು ಅದರ ತಲೆಯ ಮೇಲೆ ಇಟ್ಟಿಗೆ ಎಸೆಯುವುದನ್ನು ನೋಡಬಹುದು.
ಅಂಗಡಿ ಮಾಲೀಕ ಧರ್ಮೇಂದ್ರ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಸಲ್ಲಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ. ಇದೀಗ ಆರೋಪಿ ಜಾಕಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರವಾಗಿ ನಾಯಿ ಬೊಗಳುತ್ತಿತ್ತು ಇದರಿಂದ ನನಗೆ ಕೋಪ ಬಂದು ಅದನ್ನು ಕೊಂದೆ ಎಂದು ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIGG NEWS: ಕಾಂಗ್ರೆಸ್ ಸಮಾವೇಶ ನಡೆದ ಬಳಿಕ ಬಳ್ಳಾರಿ ಮೈದಾನ ಸ್ವಚ್ಛಗೊಳಿಸಿದ ಸಚಿವ ಶ್ರೀರಾಮುಲು
BIGG NEWS : ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಸಿಎಂ ಅಭ್ಯರ್ಥಿ ಘೋಷಣೆ ಸಾಧ್ಯತೆ : ಅರುಣ್ ಸಿಂಗ್ ಮಹತ್ವದ ಹೇಳಿಕೆ