ಲಾತೂರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಲಾತೂರ್ನಲ್ಲಿ ಮಹಿಳೆಯೊಬ್ಬಳು ತನಗೆ ಮತ್ತೆ ಹೆಣ್ಣು ಮಗು ಜನಿಸಿದೆ ಎಂದು ಅಸಮಾಧಾನಗೊಂಡು, ತನ್ನ 3 ದಿನದ ಹಸುಳೆಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.
ಒಸ್ಮಾನಾಬಾದ್ನ ಲೋಹರಾ ತಹಸಿಲ್ನ ಹೋಳಿ ನಿವಾಸಿ 25 ವರ್ಷದ ಮಹಿಳೆ ಕಾಸರ್ ಜವಾಲಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿಸೆಂಬರ್ 29 ರಂದು ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಆಕೆ ಬೇಸರಗೊಂಡಿದ್ದಳು. ಮಗು ಹುಟ್ಟಿದ ಮೂರನೇ ದಿನ ಕರವಸ್ತ್ರದಿಂದ ಮಗುವಿನ ಕತ್ತು ಹಿಸುಕಿ ಕೊಂದಿದ್ದಾಳೆ.
ಸಾವಿನ ಪ್ರಕರಣದ ತನಿಖೆಯ ನಂತರ ತನ್ನ ಹೆಣ್ಣು ಮಗುವನ್ನು ಕೊಂದ ಆರೋಪದ ಮೇಲೆ ಇದೀಗ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.