ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (UPSC) ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆಯ ನಂತರ ತಾತ್ಕಾಲಿಕ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಆದ್ರೆ, ಇಡೀ ಪರೀಕ್ಷಾ ಪ್ರಕ್ರಿಯೆ ಮುಗಿಯುವವರೆಗೆ ಕಾಯುವ ಬದಲು ಹಿಂದಿನ ಪದ್ಧತಿಯನ್ನ ಪ್ರಶ್ನಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಲಾದ ಪ್ರತಿ-ಅಫಿಡವಿಟ್’ನಲ್ಲಿ ಆಯೋಗವು ಸುಪ್ರೀಂ ಕೋರ್ಟ್‌ಗೆ ಈ ಬದಲಾವಣೆಯ ಬಗ್ಗೆ ತಿಳಿಸಿದೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರನ್ನ ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಾಯ ಮಾಡಲು ತಟಸ್ಥ ತಜ್ಞ) ಮತ್ತು ವಕೀಲ ಪ್ರಾಂಜಲ್ ಕಿಶೋರ್ ಅವರನ್ನು ಪ್ರಕರಣದಲ್ಲಿ ಸಹಾಯ ಮಾಡಲು ನೇಮಿಸಿತ್ತು. “ಪ್ರಾಥಮಿಕ ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಲಿಯನ್ನ ಪರೀಕ್ಷೆ ನಡೆದ ಒಂದು ದಿನದ ನಂತರ ಪ್ರಕಟಿಸಬೇಕು” ಎಂದು ಅಮಿಕಸ್ ಶಿಫಾರಸು ಮಾಡಿತ್ತು.
BREAKING : ಉಕ್ರೇನ್ ಪ್ರಯಾಣಿಕರ ರೈಲಿನ ಮೇಲೆ ರಷ್ಯಾ ವೈಮಾನಿಕ ದಾಳಿ, ಹಲವರು ಸಾವು ಶಂಕೆ
BREAKING: ಬಾಲಿವುಡ್ ಖ್ಯಾತ ನಟಿ ಸಂಧ್ಯಾ ಶಾಂತಾರಾಮ್ ವಿಧಿವಶ | Actor Sandhya Shantaram No More
BREAKING: ಬೆಂಗಳೂರಲ್ಲಿ ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಯಾಣಿಕ | Namma Metro