ಹುಬ್ಬಳ್ಳಿ : ಇಂದು ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಹುಡುಗಿಗೆ ಚುಡಾಯಿಸಬೇಡ ಎಂದಿದ್ದಕ್ಕೆ ಯುವಕನೊಬ್ಬ ಮಹಿಳೆಗೆ ಚಾಕು ಇರಿತ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿಯನ್ನು ವಿಚಾರಿಸುವ ವೇಳೆ ಪೋಲೀಸರ ಮೇಲೆ ಆರೋಪಿ ಮಹೇಶ್ ಹಲ್ಲೆ ಮಾಡಿದ್ದಾನೆ.ಈ ವೇಳೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ.
ಇಂದು ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಹುಡುಗಿಗೆ ಚುಡಾಯಿಸಬೇಡ ಎಂದು ನೀಲಾ ಹಂಪಣ್ಣವರ ಮಹಿಳೆ ಮೇಲೆ ಮಹೇಶ್ ಎನ್ನುವ ವ್ಯಕ್ತಿ ಚಾಕು ಇರಿದಿದ್ದಾನೆ. ಈ ವೇಳೆ ಆರೋಪಿ ಮಹೇಶ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಮಹೇಶ್ ಪೋಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಆರೋಪಿ ಮಹೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಮದುವೆಯಾಗುವಂತೆ ನೀಲಾ ಮಗಳಿಗೆ ಪೀಡಿಸುತ್ತಿದ್ದ ಅದಕ್ಕೆ ನೀಲಾ ಮಹೇಶ್ ಗೆ ಬುದ್ಧಿ ಹೇಳಿದ್ದಾರೆ. ಸದ್ಯ ಮಹೇಶ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಹಿನ್ನೆಲೆ?
ಹುಬ್ಬಳ್ಳಿಯ ಲೋಹಿಯ ನಗರದಲ್ಲಿ ಮಹಿಳೆಗೆ ಚಾಕು ಹಿಡಿದಿರುವ ಘಟನೆ ನಡೆದಿದೆ. ನೀಲಾ ಹಂಪಣ್ಣವರ ಎನ್ನುವ ಮಹಿಳೆಗೆ ಮಹೇಶ ಎನ್ನುವ ವ್ಯಕ್ತಿ ಚಾಕು ಇರಿದು ಪರಾರಿಯಾಗಿದ್ದಾನೆ. ಹುಡುಗಿ ಚುಡಾಯಿಸಿದ್ದಕ್ಕೆ ನೀಲಾ ಮಹೇಶ್ ಗೆ ಬುದ್ಧಿ ಹೇಳಿದರು. ಬುದ್ಧಿ ಹೇಳಿದ್ದಕ್ಕೆ ಆಕ್ರೋಶಗೊಂಡು ನೀಲಾಗೆ ಮಹೇಶ್ ಚಾಕು ಇರಿದಿದ್ದಾನೆ.
ಮಹೇಶ್ ನೀಲಾ ಹಡಪದಿಗೆ ಚಾಕು ಇರಿದು ಪರಾರಿ ಆಗಿದ್ದಾನೆ. ಕೂಡಲೇ ಪೊಲೀಸರು ಆರೋಪಿ ಮಹೇಶನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಾಳು ನೀಲಾಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಿವಕುಮಾರ್ ಭೇಟಿ ನೀಡಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.