ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಟಿಬೆಟ್’ನ ಪವಿತ್ರ ನಗರಗಳಲ್ಲಿ ಒಂದಾದ ಹಿಮಾಲಯದ ಉತ್ತರದ ತಪ್ಪಲಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಇನ್ನು ಇದ್ರಲ್ಲಿ ಕನಿಷ್ಠ 130 ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎವರೆಸ್ಟ್ ಪ್ರದೇಶದ ಉತ್ತರದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಗ್ರಾಮೀಣ ಕೌಂಟಿಯಾದ ಟಿಂಗ್ರಿಯಲ್ಲಿ ಮಂಗಳವಾರ ಬೆಳಿಗ್ಗೆ ಭೂಕಂಪದ ಕೇಂದ್ರಬಿಂದು 6.2 ಮೈಲಿ ಆಳದಲ್ಲಿತ್ತು ಎಂದು ಚೀನಾ ಭೂಕಂಪ ಜಾಲ ಕೇಂದ್ರ ತಿಳಿಸಿದೆ. ಇನ್ನು ನೆರೆಯ ನೇಪಾಳ, ಭೂತಾನ್ ಮತ್ತು ಭಾರತದಲ್ಲಿ ಕಂಪಿಸಿದ ಅನುಭವ ಆಗಿದೆ.
ಟಿಬೆಟಿಯನ್ ಬೌದ್ಧ ಧರ್ಮದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಪಂಚೆನ್ ಲಾಮಾ ಅವರ ಸಾಂಪ್ರದಾಯಿಕ ಸ್ಥಾನವಾದ ಶಿಗಟ್ಸೆ ನಿರ್ವಹಿಸುವ 800,000 ಜನರ ಪ್ರದೇಶದಾದ್ಯಂತ ಭೂಕಂಪದ ಪರಿಣಾಮವನ್ನ ಅನುಭವವಾಗಿದೆ.