ಬೆಂಗಳೂರು : ಬೆಂಗಳೂರಿನಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮೂವರು ಹೆಣ್ಣು ಮಕ್ಕಳು ದಿಢೀರ್ ನಾಪತ್ತೆಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ನಾಪತ್ತೆಯಾಗಿದ್ದ ಮೂವರು ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಹಾಗಾಗಿ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಹೌದು ಈ ಒಂದು ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮರಿಯಪ್ಪನಪಾಳ್ಯದಲ್ಲಿ ಸಂಜೆ 4 ಗಂಟೆಗೆ ನಡೆದಿತ್ತು. ಕಾಣೆಯಾದ ಮಕ್ಕಳನ್ನು ಹರ್ಷಿತ (3) ನಿಶ್ವಿಕ (6) ಹಾಗೂ ರಶ್ಮಿತಾ (10) ಎಂದು ನಾಪತ್ತೆಯಾದ ಮಕ್ಕಳು ಎಂದು ಹೇಳಲಾಗಿತ್ತು.
ಮೂವರು ಹೆಣ್ಣು ಮಕ್ಕಳು ಮನೆಯ ದಾರಿತಪ್ಪಿ ಬೇರೆ ರಸ್ತೆ ತೆರಳಿದ್ದರು ಕುಟುಂಬದ ಸದಸ್ಯರು ಹುಡುಕುತ್ತಿದ್ದ ವೇಳೆ ಮಕ್ಕಳು ಕಣ್ಣಿಗೆ ಬಿದ್ದಿದ್ದಾರೆ. ಮರಿಯಪ್ಪನ ಪಾಳ್ಯದಲ್ಲಿ ಮೂವರು ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಮಕ್ಕಳು ನಾಪತ್ತೆ ಬಗ್ಗೆ ದೂರು ನೀಡಲು ಪೋಷಕರು ಠಾಣೆಗೆ ಆಗಮಿಸಿದ್ದರು. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.