ಬೆಂಗಳೂರು : ಬೆಂಗಳೂರಿನ ಜಯನಗರದಲ್ಲಿ ಐಷಾರಾಮಿ ಕಾರಿನಲ್ಲಿ ಪತ್ತೆಯಾಗಿದ್ದು 1.40 ರೂಪಾಯಿ ಎಂದು ಇದೀಗ ಚುನಾವಣಾ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದ್ದು ಸತತ ಎರಡು ಗಂಟೆಗಳ ಕಾಲ ಎರಡು ಮಿಷನ್ ಗಳಲ್ಲಿ ಹಣವನ್ನು ಎಣಿಸಿದ್ದು ಇದೀಗ ಎಣಿಕೆ ಕಾರ್ಯ ಮುಕ್ತವಾಗಿದ್ದು ಚುನಾವಣಾ ಅಧಿಕಾರಿಗಳು ಐಷಾರಾಮಿ ಕಾರಿನಲ್ಲಿ ಒಂದು ಕೋಟಿ ನಲವತ್ತು ಲಕ್ಷ ಹಣ ಪತ್ತೆಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಜೆಪಿ ಮತ್ತು ‘ಎಐಎಂಐಎಂ’ ಕೈ ಜೋಡಿಸಿ ಕೆಲಸ ಮಾಡುತ್ತಿವೆ: ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್
ಈ ಕುರಿತು ಚುನಾವಣೆ ಅಧಿಕಾರಿ ಮನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದು ಎರಡು ಕಾರಿನಲ್ಲಿ ಹಣ ಇರಬಹುದು ಎಂಬ ಮಾಹಿತಿ ಬಂದಿತು ನಾನು ತಕ್ಷಣ ನಿಕಿತಾ ಅವರಿಗೆ ಕರೆ ಮಾಡಿದೆ. ಚುನಾವಣಾ ಅಧಿಕಾರಿ ನಿಕಿತಾ ಅವರು ಕಾರಿನಲ್ಲಿದ್ದ ಎರಡು ಬ್ಯಾಗ್ ಗಳನ್ನು ಗಳಿಸಿಕೊಂಡಿದ್ದರು ಒಂದು ಕಾರ್ ಅಲ್ಲಿಂದ ಪರಾರಿಯಾಗಿ ಹೋಗಿದ್ದು ಅದರಲ್ಲಿ ಇವರು ತಪ್ಪಿಸಿಕೊಂಡು ಹೋಗಿದ್ದಾರೆ ಒಂದು ಮರ್ಸಿಡಿಸ್ ಬೆಂಜ್ ಇನ್ನೊಂದು ವೋಕ್ಸ್ ವ್ಯಾಗನ್ ಕಾರ್ಲೆಂದು ಇನ್ನೊಂದು ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮನೀಶ್ ಮೌದ್ಗಿಲ್ ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಇಲ್ಲದಿದ್ರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗ್ತಿರ್ಲಿಲ್ಲ : ರಾಜ್ ಠಾಕ್ರೆ
ನಾನು ರೌಂಡ್ಸ್ ನಲ್ಲಿದ್ದೆ, ಒಬ್ಬಳೇ ಬಂದು ದಾಳಿ ಮಾಡಿದ್ದೆ. ಕಾರು ಬೈಕ್ ನಲ್ಲಿ ಹಣ ಸಾಗಿಸುತ್ತಿದ್ದ ಮಾಹಿತಿ ಬಂದಿತು. ಒಂದು ಕಾರಿನಿಂದ ಮತ್ತೊಂದು ಕಾರಿಗೆ ಹಣ ಇರುವ ಬ್ಯಾಗ ಡಂಪ್ ಮಾಡಲಾಗುತ್ತಿತ್ತು. ಬ್ಯಾಗಿ ತೋರಿಸಿ ಎಂದಾಗ ಮೊದಲು ತೋರಿಸಲಿಲ್ಲ. ಬ್ಯಾಗ್ ನಲ್ಲಿ ಏನಿದೆ ಅಂತ ಕೇಳಿದಾಗ ಆಪಲ್ ಹಣ್ಣಿದೆ ಎಂದು ಹೇಳಿದರು ಕೊಡಿಬಾಗ್ ನೋಡೋಣ ಎಂದು ಕೇಳಿದಾಗ ಅವರು ಕೊಡಲಿಲ್ಲ ನಾನು ಬ್ಯಾಗನ್ನು ಕಿತ್ತುಕೊಂಡೆ ಇನ್ನೊಂದು ಕಾರು ಅಲ್ಲಿಂದ ಎಸ್ಕೇಪ್ ಆಗಿದೆ ಎಂದು ಚುನಾವಣಾ ಅಧಿಕಾರಿ ನಿಖಿತಾ ಮಾಹಿತಿ ನೀಡಿದರು.
ಘಟನೆ ಹಿನ್ನೆಲೆ?
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನೀಟ್ಟಾಗಿ ಪಾಲಿಸುತ್ತಿದ್ದರು ಕೂಡ ಅಲ್ಲಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದದ್ದು ಚುನಾವಣಾ ಅಧಿಕಾರಿಗಳು ಅಂತಹ ಕ್ರಮಗಳನ್ನು ತಡೆಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಬೆಂಗಳೂರಿನ ಜಯನಗರದಲ್ಲಿ ಕಾರಿನೊಳಗಡೆ ಕೋಟ್ಯಾಂತರ ರೂಪಾಯಿ ಪತ್ತೆಯಾಗಿದ್ದು ಹಣ ಪತ್ತೆಯಾದ ತಕ್ಷಣ ಅಲ್ಲಿಂದ ಐವರು ಸ್ಥಳದಿಂದ ಪರಾರಿ ಯಾಗಿರುವ ಘಟನೆ ನಡೆದಿದೆ.
ಹೌದು ಬೆಂಗಳೂರಿನ ಜಯನಗರದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಮೂರು ಬ್ಯಾಗ್ ಗಳಲ್ಲಿ ಕೋಟ್ಯಾಂತರ ಹಣ ಪತ್ತೆಯಾಗಿದೆ. ಜಯನಗರದ ಒಂದು ಮರ್ಸಿಡಿಸ್ ಬೆಂಜ್ ಹಾಗೂ ವೊಕ್ಸ್ ವ್ಯಾಗನ್ ಕಾರಿನಲ್ಲಿ ಈ ಒಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿತ್ತು.ಈ ಹಿನ್ನೆಲೆಯಲ್ಲಿ ಆ ಹಣವನ್ನು ಅಧಿಕಾರಿಗಳು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದು, ಠಾಣೆಗೆ ಹಣ ಎಣಿಸುವ ಮಷೀನ್ ತಂದ ಐಟಿ ಸಿಬ್ಬಂದಿ.
ಇದೀಗ ಹಣ ಇರುವಂತಹ ಎರಡು ಕಾರುಗಳನ್ನು ಫ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿದೆ ಎನ್ನಲಾಗಿದೆ.ಸದ್ಯ ಹಣ ಎಣಿಕೆ ಕಾರ್ಯ ಮುಕ್ತಯವಾಗಿದ್ದು ಒಟ್ಟು 1.40 ಕೋಟಿ ರೂಪಾಯಿ ಹಣ ಇದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ. ಇನ್ನು ಈ ಹಣದ ಮೂಲ ಯಾವುದು ಹಾಗೂ ಈ ಹಣದ ವಾರಸುದಾರರು ಯಾರು ಎಂಬುದರ ಕುರಿತು ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.