ಮಂಡ್ಯ : ಜಿಲ್ಲೆಯ ಮೇಲುಕೋಟೆ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಬೆಳಕಿಗೆ ಬಂದ 30 ಗಂಟೆಯಲ್ಲಿ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಶಾಲಾ ಶಿಕ್ಷಕಿ ದೀಪಿಕಾ ಗಳನ್ನು ನಿತೀಶ್ (21) ಎನ್ನುವ ಯುವಕ ಹತ್ಯೆ ಮಾಡಿ ಪರಾರಿಯಾಗಿದ್ದ. ಡಿವೈಎಸ್ಪಿ ಮುರುಳಿ ನೇತೃತ್ವದಲ್ಲಿ ಇದೀಗ ಆರೋಪಿಯನ್ನ ಬಂಧಿಸಲಾಗಿದೆ.
ಆರೋಪಿ ಯುವಕ ಮೊದಲೇ ಪ್ಲಾನ್ ಮಾಡಿ ಶಿಕ್ಷಕಿಯನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ದೀಪಿಕಾ ಕೊಲೆಗೂ ಮುನ್ನ ಆರೋಪಿ ಗುಂಡಿ ತೆಗೆದಿದ್ದ ಎಲ್ಲನಾಗಿದೆ.ನಂತರ ಮಾರನೇ ದಿನ ಶಿಕ್ಷಕಿ ದೀಪಿಕಾ ಅಡ್ಡಗಟ್ಟಿ ಕೊಲೆ ಗೈದಿದ್ದಾನೆ ವೆಲ್ ನಿಂದ ಶಿಕ್ಷಕಿಯ ಕುತ್ತಿಗೆ ಬಿಗಿದು ನಿತೀಶ್ ಕೊಲೆ ಮಾಡಿದ್ದಾನೆ.
ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಕೊಲೆ ಮಾಡಿದ ನಂತರ ದೀಪಿಕಾಳನ್ನು ಮಣ್ಣಿನಲ್ಲಿ ನಿತೀಶ್ ಹೂತಿದ್ದ. ಜನವರಿ 20 ರಂದು ಶಾಲೆಗೆ ಹೋಗಿದ್ದ ದೀಪಿಕಾ ನಾಪತ್ತೆಯಾಗಿದ್ದರು. ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ನಿವಾಸಿಯಾಗಿದ್ದರು ಎಂದು ಹೇಳಲಾಗುತ್ತಿದ್ದು, ಪತ್ನಿ ನಾಪತ್ತೆ ಬಗ್ಗೆ ಪತಿ ಲೋಕೇಶ್ ಪೊಲೀಸರಿಗೆ ದೂರು ನೀಡಿದ್ದರು.
ಜನವರಿ 22ರ ಸಂಜೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು.ದೀಪಿಕಾ ಶವ ಪತ್ತೆಯಾಗುತ್ತಿದ್ದಂತೆ ತಕ್ಷಣ ಆರೋಪಿ ನಿತೀಶ್ ಗ್ರಾಮದಿಂದ ಪರಾರಿಯಾಗಿದ್ದಾನೆ.ನಿತೀಶ್ ಬಗ್ಗೆ ದೀಪಿಕಾ ಪತಿ ಲೋಕೇಶ್ ಅನುಮಾನ ವ್ಯಕ್ತಪಡಿಸಿದ್ದರು.
ಆರೋಪಿಯನ್ನು ಇದೀಗ ಮೇಲುಕೋಟೆ ಪೊಲೀಸರು ಬಂಧಿಸಿದ್ದಾರೆ.