ಬಳ್ಳಾರಿ : ರಾಮಲಲ್ಲಾನ ದರ್ಶನ ಪಡೆದು ತಮ್ಮೂರಿಗೆ ವಾಪಾಸ್ಸಾಗುತ್ತಿದ್ದ ಯಾತ್ರಿಕರ ಬೋಗಿಗೆ ದುಷ್ಕರ್ಮಿಗಳು ನುಗ್ಗಿ, ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಓರ್ವನನ್ನು ವಶಕ್ಕೆ ಪಡೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗದಗ ಹೊರವಲಯದಲ್ಲಿ ವಶಕ್ಕೆ ಪಡೆದು ಆರೋಪಿಯನ್ನು ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಬಳ್ಳಾರಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿದೆ.
ಘಟನೆ ಹಿನ್ನೆಲೆ?
ಅಯೋಧ್ಯೆ ರಾಮನ ದರ್ಶನ ಪಡೆದು ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಂತಿದೆ. ಈ ವೇಳೆ ಅನ್ಯಕೋಮಿನ ಮೂವರು ಯುವಕರು, ಅಯೋಧ್ಯೆ ಯಾತ್ರಿಕರಿಗೆ ಮೀಸಲಾಗಿದ ಬೋಗಿಯನ್ನು ನುಗ್ಗಿದ್ದಾರೆ.
‘ಸಿಎಂ ಸಿದ್ದರಾಮಯ್ಯ’ ಮನೆಯ ಹತ್ತಿರವೇ ಕೆಜಿಗಟ್ಟಲೆ ‘ಚಿನ್ನಾಭರಣ’ ಕಳ್ಳತನ : ಅಸ್ಸಾಂ ಮೂಲದ ವ್ಯಕ್ತಿಯ ಬಂಧನ
ಯುವಕರನ್ನ ತಡೆದ ಯಾತ್ರಿಕರು ಇದು ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿ ಇದರಲ್ಲಿ ತಾವು ಹತ್ತುವ ಹಾಗಿಲ್ಲ ಎಂದು ತಿಳಿ ಹೇಳಿದ್ದಾರೆ. ಆದರೆ ಇದನ್ನು ಲೆಕ್ಕಿಸದ ದುಷ್ಕರ್ಮಿಗಳು, ರೈಲು ಏನು ನಿಮ್ಮ ಅಪ್ಪನ ಮನೆದಲ್ಲ. ಇದಕ್ಕೆ ಬೆಂಕಿ ಹಚ್ಚಿ ಸುಟ್ಟು ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
BREAKING : ಚಾಮರಾಜನಗರ: ಮಗಳಿಗೆ ತೊಂದರೆ ಕೊಡುತ್ತಿದ್ದ ಅಳಿಯನ ಭೀಕರವಾಗಿ ಕೊಲೆ
ಯಾತ್ರಿಕರು ತಕ್ಷಣವೇ ಈ ದುಷ್ಕರ್ಮಿಗಳನ್ನು ಹಿಡಿದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.ಯುವಕರನ್ನ ಬಂಧಿಸಿ ಅವರ ವಿರುದ್ಧ ಎಪ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ಇಳಿದಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಭರವಸೆ ನೀಡದ ಬಳಿಕ ರೈಲು ಸಂಚಾರ ಆರಂಭವಾಯಿತು.