ರಾಯಚೂರು : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ತಡೆ ಹಿಡಿದ ವಿಚಾರಕ್ಕೆ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕೀಯ ಪುತ್ರ ಹಾಗೂ ಪಿಎ ವಿರುದ್ಧ ದೇವದುರ್ಗ ತಾಲೂಕ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಪುತ್ರ ಸಂತೋಷ್ ನನ್ನು ಎ1 ಹಾಗೂ ಪಿಎ ಇಲಿಯಾಸ್ ಎ5 ಆರೋಪಿ ಎಂದು FIR ದಾಖಲಾಗಿದೆ.
ರೈಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಅಕ್ರಮವಾಗಿ ಡಾಕ್ಟರ್ ನಲ್ಲಿ ಮರಳು ಸಾಗಿಸುತ್ತಿದ್ದನ್ನು ತಡೆದಿದ್ದಕ್ಕೆ,ಕಾನ್ಸ್ಟೇಬಲ್ ಹನುಮಂತರಾಯ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ಹಾಗೂ ಪಿಎ ಇಲಿಯಾಸ್ ಹಲ್ಲೆ ನಡೆಸಿದ್ದಾರೆ ಎಂದು ಹನುಮಂತರಾಯ ಆರೋಪಿಸಿದ್ದರು. ಇದೀಗ ಶಾಸಕಿ ಪತ್ರ ಸಂತೋಷ ಹಾಗೂ ಪಿಎ ಇಲಿಯಾಸ್ ವಿರುದ್ಧ fir ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಪ್ರತಿಕ್ರಿಯೆ ನೀಡಿದ್ದು,ಯಾವುದೇ ರೀತಿಯಾದಂತಹ ಘಟನೆ ನಡೆದಿಲ್ಲ. ನಮ್ಮ ಮಗನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದ್ದು ಇದೊಂದು ರಾಜಕೀಯ ಷಡ್ಯಂತರವಾಗಿದೆ. ಖಾಲಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ ಪೋಲಿಸ್ ಠಾಣೆಯಲ್ಲಿ ನಿಲ್ಲಿಸಿಕೊಂಡಿದ್ದಕ್ಕೆ ನಡೆದಿದ್ದು ಇದರಲ್ಲಿ ನನ್ನ ಮಗನ ಹೆಸರು ತಳಕು ಹಾಕಿಕೊಂಡಿದೆ ನಿರಂತರವಾಗಿ ನಮ್ಮ ಮನೆ ಮೇಲೆ ಹಾಗೂ ನನ್ನ ಮಗನ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ.ಎಂದು ಆರೋಪಿಸಿದರು.
ನಮ್ಮ ಮಗ ಆಗಲಿ ಪಿಎ ಆಗಲಿ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿಲ್ಲ ಹೊಡೆದಿದ್ದಾರೆಂದು ವಿಡಿಯೋ ರೆಕಾರ್ಡ್ ಇದೆಯಲ್ಲ ಹಾಗಾದರೆ ವಿಡಿಯೋ ದೃಶ್ಯಗಳು ಬೇಕಲ್ಲವೇ ಸುಮ್ಮನೆ ಆರೋಪ ಮಾಡಿದರೆ ನನ್ನ ವಿರುದ್ಧ ಇರಲಿ ಷಡ್ಯಂತರ ಮಾಡುತ್ತಾ ಹೋದರೆ ಹೇಗೆ? ಅವರು ಮಾಡುವಂತಹ ಅಕ್ರಮ ಮರಳು ಎಸ್ಟೇಟು ಮಟ್ಕಾ ಇದೆಲ್ಲವನ್ನು ನಿಲ್ಲಿಸಬೇಕೆಂದು ನಾನು ಸತತವಾಗಿ ಹೋರಾಟ ಮಾಡುತ್ತಿದ್ದೇನೆ ಹಾಗಾಗಿ ರಾಜಕೀಯ ದ್ವೇಷದಿಂದ ಈ ರೀತಿ ಮಾಡುತ್ತಿದ್ದಾರೆ.ಎಂದು ಆರೋಪಿಸಿದರು.
ಘಟನೆ ಹಿನ್ನೆಲೆ?
ನಿನ್ನೆ ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದನ್ನು ಕಾನ್ಸ್ಟೇಬಲ್ ಹನುಮಂತರಾಯ ತಡೆದು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾನ್ಸ್ಟೇಬಲ್ ಹನುಮಂತರಾಯನನ್ನು ಪ್ರವಾಸಿ ಮಂದರಕ್ಕೆ ಕರೆಸಿ ಅವರ ಮೇಲೆ ಹಲ್ಲೆ ಮಾಡಿದಾರೆ ಎಂದು ಆರೋಪ ಕೇಳಿಬಂದಿದೆ.ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ದೇವದುರ್ಗ ಠಾಣೆಯ ಕಾನ್ಸ್ಟೇಬಲ್ ಹನುಮಂತ ರಾಯ ಮೇಲೆ ಶಾಸಕೀಯ ಪುತ್ರ ಹಾಗೂ ಪಿಎ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ದೇವದುರ್ಗದ ಜೆಡಿಎಸ್ ಶಾಸಕೀ ಕರೆಮ್ಮ ನಾಯಕ ಪುತ್ರ ಸಂತೋಷ್ ಹಾಗೂ ಪಿಎ ಇಲಿಯಾಸ್ ಸೇರಿ 8 ಜನರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ನಿನ್ನೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ತಡೆ ಹಿಡಿದ ವಿಚಾರಕ್ಕೆ ಶಾಸಕ ಪುತ್ರನಿಂದ ಕರೆ ಬಂದಿದೆ. ಹನುಮಂತರಾಯಗೆ ಫೋನ್ ಕರೆ ಮಾಡಿ ಟ್ರಾಕ್ಟರ್ ಬಿಡುವಂತೆ ಹೇಳಲಾಗಿದೆ.ಆದರೆ ಹನುಮಂತರಾಯ ಯಾವುದೇ ಒತ್ತಡಕ್ಕೆ ಮಣಿಯದೆ ಟ್ರಾಕ್ಟರ್ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ.ಇದೇ ವಿಚಾರಕ್ಕೆ ಕಾನ್ಸ್ಟೇಬಲ್ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.ಪ್ರವಾಸಿ ಮಂದಿರಕ್ಕೆ ಕಾನ್ಸ್ಟೇಬಲ್ ಹನುಮಂತ ರಾಯನನ್ನು ಕರೆಸಿಕೊಂಡು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಶಾಸಕೀಯ ಕರೆಮ್ಮ ನಾಯಕ್ ಪುತ್ರ ಸಂತೋಷ ಹಾಗೂ ಪಿ ಎ ಇಲಿಯಾಸ್ ಸೇರಿ ಎಂಟು ಜನ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಹನುಮಂತ ರಾಯ ಆರೋಪಿಸಿದ್ದಾರೆ.ಘಟನೆಯ ಬಳಿಕ ರಾಜಕೀಯ ಪ್ರಭಾವದಿಂದ ಪ್ರಕರಣ ಮುಖ್ಯ ಹಾಕಲು ಯತ್ನಿಸಲಾಗುತ್ತಿದೆ. ಸದ್ಯ ಹಲ್ಲೆಗೆ ಒಳಗಾದ ಹನುಮಂತರಾಯಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.